ಕುಷ್ಠಪೀಡಿತ ಮಕ್ಕಳು, ಅನಾಥರು, ಜೈಲು ಶಿಕ್ಷೆ ಗುರಿಯಾದವರ ಕಂದಮ್ಮಗಳು, ಕೋವಿಡ್ನಿಂದ ತಂದೆ ಅಥವಾ ತಾಯಿ ಕಳೆದಕೊಂಡು ಏಕಪಾಲಕರಾದ ಮಕ್ಕಳ ಶಿಕ್ಷಣ, ಪೌಷ್ಟಿಕ ಆಹಾರ, ಟ್ಯೂಷನ್ ಭತ್ಯೆ ಮತ್ತಿತರ ಖರ್ಚಿಗೆ ನೆರವು ನೀಡುವ ಉದ್ದೇಶದಿಂದ ರಾಜ್ಯದಲ್ಲಿ ಪ್ರಾಯೋಜಕತ್ವ ಯೋಜನೆ ಜಾರಿಗೆ ತರಲಾಗಿದೆ. ಆದರೆ ಮಾಸಾಶನ ದೊರೆಯದ ಪರಿಣಾಮ ಪಾಲಕರು ಮತ್ತು ಮಕ್ಕಳು ಜಿಲ್ಲಾಧಿಕಾರಿ ಕಚೇರಿಗೆ ಅಲೆಯುವಂತಾಗಿದೆ.