ಸೆ.5ಕ್ಕೆ ವಿಜಯನಗರ ಜಿಲ್ಲೆ ಕೂಡ್ಲಗಿಯಲ್ಲಿ ನಡೆದ ಅಭಿಯಾನಕ್ಕೆ ಡಿ.ಕೆ. ಶಿವಕುಮಾರ್ ಚಾಲನೆ ನೀಡಿದ್ದರು. ಇದೇ ವೇಳೆ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿ ಮತ್ತು ಉಸ್ತುವಾರಿ ಸಚಿವರು, ಶಾಸಕರ ಸಮ್ಮುಖದಲ್ಲಿ ಅಭಿಯಾನ ನಡೆಸಿ ಜನರಿಂದ ಕುಂದುಕೊರತೆ ಮತ್ತು ಮನವಿ ಪತ್ರಗಳನ್ನು ಸ್ವೀಕರಿಸಿದ್ದಾರೆ. ರಾಜ್ಯವ್ಯಾಪಿ 41 ಇಲಾಖೆಗೆ ಸಂಬಂಧಪಟ್ಟ 23,524 ಕುಂದುಕೊರತೆಗಳ ಅರ್ಜಿ ಹಾಗೂ 2,258 ಮನವಿ ಪತ್ರಗಳನ್ನು ಅಧಿಕಾರಿಗಳು ಆನ್‌ಲೈನ್‌ನಲ್ಲಿ ಪಡೆದಿದ್ದಾರೆ.