23,688 ಮಕ್ಕಳಿಗೆ ಲಸಿಕೆ / NELAMANGAL

ನೆಲಮಂಗಲದ ಬಸವಣ್ಣ ದೇವರ ಮಠದ ರಸ್ತೆಯಲ್ಲಿ ರೋಟರಿಯಿಂದ ಪೋಲಿಯೋ ಲಸಿಕೆ ಹಾಕಲಾಯಿತು.
ನೆಲಮಂಗಲದ ಬಸವಣ್ಣ ದೇವರ ಮಠದ ರಸ್ತೆಯಲ್ಲಿ ರೋಟರಿಯಿಂದ ಪೋಲಿಯೋ ಲಸಿಕೆ ಹಾಕಲಾಯಿತು.
Published on
ನೆಲಮಂಗಲ : ನಗರ ಮತ್ತು ಗ್ರಾಮೀಣ ಭಾಗದ ಖಾಸಗಿ ನರ್ಸಿಂಗ್​ ಕಾಲೇಜು ಹಾಗೂ ರೋಟರಿಯಂತಹ ಸರ್ಕಾರೇತರ ಸಂಸ್ಥೆಗಳ ಸಹಕಾರದಿಂದಾಗಿ ತಾಲೂಕಿನ 5 ವರ್ಷದೊಳಗಿನ 23,688 ಮಕ್ಕಳಲ್ಲಿ ಶೇ.98 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಪದ್ಮಿನಿ ತಿಳಿಸಿದರು.
ತಾಲೂಕಿನ 98 ಬೂತ್​ಗಳಲ್ಲಿ 404 ಸಿಬ್ಬಂದಿ, ಸ್ವಯಂಸೇವಕರ ಸಹಕಾರದೊಂದಿಗೆ ಲಸಿಕೆ ಹಾಕಲಾಗಿದ್ದು, 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿದ್ದಾರೆ. ನೆಲಮಂಗಲದಲ್ಲಿ ಮೊದಲ ದಿನವೇ 23 ಸಾವಿರ ಮಕ್ಕಳಿಗೆ ಲಸಿಕೆ ಹಾಕಿದ್ದು, ಉಳಿದ ಮಕ್ಕಳಿಗೆ ಮನೆ ಭೇಟಿ ಮಾಡಿ ಲಸಿಕೆ ಹಾಕುವುದಾಗಿ ಮಾಹಿತಿ ನೀಡಿದರು. ತಾಲೂಕಿನಲ್ಲಿ ಯಾವ ಮಗುವೂ ಲಸಿಕೆಯಿಂದ ಹೊರಗೆ ಉಳಿಯದಂತೆ ಎಚ್ಚರಿಕೆ ವಹಿಸಲಾಗಿದೆ. ಪಾಲಕರು ರ್ನಿಲಕ್ಷ$್ಯವಹಿಸದೇ ಮಕ್ಕಳಿಗೆ ಪೋಲೀಯೊ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಟಿಎಚ್​ಒ ಪದ್ಮಿನಿ ತಿಳಿಸಿದರು.
ಟೋಲ್​ಗಳಲ್ಲಿ ಲಸಿಕೆ : ತಾಲೂಕಿನಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳಿರುವ ಕಾರಣ ಮೂರು ಟೋಲ್​ಗಳಲ್ಲಿ ಲಸಿಕೆ ಬೂತ್​ ಆರಂಭಿಸಲಾಗಿತ್ತು. ಬೆಂಗಳೂರು, ಮಂಗಳೂರು, ತುಮಕೂರು, ಚಿತ್ರದುರ್ಗ ಸೇರಿ ವಿವಿಧ ಭಾಗಗಳಿಗೆ ಹೋಗುವ ವಾಹನ ಸವಾರರು ಮಕ್ಕಳಿಗೆ ಲಸಿಕೆ ಹಾಕಿಸಿಕೊಳ್ಳಲು ಸಹಕಾರಿಯಾಯಿತು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಗರಸಭೆ ಅಧ್ಯಕ್ಷ ಎನ್​.ಗಣೇಶ್​ ಪೋಲಿಯೋ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು. ಹರ್ಷ ನರ್ಸಿಂಗ್​ ಕಾಲೇಜು, ಜುಪಿಟರ್​ ನರ್ಸಿಂಗ್​ ಕಾಲೇಜು, ಅಂಬಿಕಾ ನರ್ಸಿಂಗ್​ ಕಾಲೇಜು ಹಾಗೂ ರೋಟರಿ ನೆಲಮಂಗಲದ ಸ್ವಯಂ ಸೇವಕರು, ನರ್ಸಿಂಗ್​ ವಿದ್ಯಾರ್ಥಿಗಳು ಅಭಿಯಾನದಲ್ಲಿ ಭಾಗವಹಿಸಿದ್ದರು.
ರೋಟರಿ ಸಹಕಾರ : ಸೊಂಡೇಕೊಪ್ಪ ರಸ್ತೆಯ ಬಸವಣ್ಣ ದೇವರ ಮಠ, ಚನ್ನಪ್ಪ ಬಡಾವಣೆಯಲ್ಲಿ ನೆಲಮಂಗಲ ರೋಟರಿ ಪದಾಧಿಕಾರಿಗಳು ಕೆಂಪು ಟೀಶರ್ಟ್​ ಸಾಮೂಹಿಕ ಸಮವಸ್ತ್ರ ಧರಿಸಿ ಲಸಿಕೆ ಅಭಿಯಾನದಲ್ಲಿ ಭಾಗವಹಿಸಿದ್ದರು. ರೋಟರಿ ಅಧ್ಯಕ್ಷ ಜಿ.ಆರ್​.ನಾಗರಾಜು, ಕಾರ್ಯದರ್ಶಿ ರವಿಕುಮಾರ್​, ನಿರ್ದೇಶಕ ಚಂದ್ರಕುಮಾರ್​, ರಾಜಶೇಖರ್​, ಖಜಾಂಚಿ ಗಂಗರಾಜು, ಮಾಜಿ ಅಧ್ಯಕ್ಷ ಸಿ.ಜಿ.ಮಂಜುನಾಥ್​, ಸೋಮಶೇಖರ್​, ಎಂ.ಸಿ.ಮಂಜುನಾಥ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net