ಬೆಂಗಳೂರು: ಅಕ್ರಮ ಕಬ್ಬಿಣದ ಅದಿರು ಗಣಿಗಾರಿಕೆ ಹಾಗೂ ರಫ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಅಕ್ಷತಾ ಮಿನರಲ್ಸ್ ಸಂಸ್ಥೆ ಸೇರಿ ಇತರರಿಗೆ ಸೇರಿದ 2.10 ಕೋಟಿ ಮೌಲ್ಯದ ನಾಲ್ಕು ಸ್ಥಿರಾಸ್ತಿ ಜಪ್ತಿ ಮಾಡಿದೆ.
20213ರಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದ ಬಳಿಕ ತನಿಖೆ ನಡೆಸಿ, ಸಿಬಿಐ ದಾಖಲಿಸಿರುವ ಎ್ಆರ್ ಆಧಾರದ ಮೇಲೆ ಬೆಂಗಳೂರು ವಲಯ ಕಚೇರಿ ಅಧಿಕಾರಿಗಳು ಬುಧವಾರ ದಾಳಿ ನಡೆಸಿತ್ತು. ಬೆಲೆಕೇರಿ ಬಂದರಿನಿಂದ ಅಕ್ರಮವಾಗಿ ಕಬ್ಬಿಣದ ಅದಿರನ್ನು ಗಣಿಗಾರಿಕೆ ನಡೆಸಿ ರಫ್ತು ಮಾಡಿರುವ ಆರೋಪದ ಮೇಲೆ ಎಸ್‌ವಿಕೆ ಮಿನಿರಲ್ಸ್ ಎಂಬ ಪಾಲುದಾರಿಕೆ ಸಂಸ್ಥೆ ಕಬ್ಬಿಣದ ಅದಿರು ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವುದು ಪತ್ತೆಯಾಗಿದೆ.
2009ರ ಜನವರಿ 1ರಿಂದ 2010ರ ಮೇ 31ರವರೆಗೆ ಸಂಸ್ಥೆಯು ಅಕ್ರಮವಾಗಿ ಸಂಗ್ರಹಿಸಲಾದ ಕಬ್ಬಿಣದ ಅದಿರನ್ನು ವಿವಿಧ ಸಂಸ್ಥೆಗಳಿಗೆ ಪೂರೈಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
48,471 ಮೆಟ್ರಿಕ್ ಟನ್ ಅದಿರಿಗೆ ದಾಖಲೆಗಳೇ ಇಲ್ಲ:
ಭಾರತ್ ಓರ್ಸ್ ಆ್ಯಂಡ್ ಮಿನರಲ್ಸ್ ಮೂಲಕ ಪೂರೈಕೆಯಾಗಿರುವ ಅಧಿರು, ಅಂತಿಮವಾಗಿ ಹೆಚ್‌ಎಲ್‌ಎಲ್ ಲ್ೈಕೇರ್ ಪೈ.ಲಿ. ತಲುಪಿರುವ ಅಂದಾಜು 48,471 ಮೆಟ್ರಿಕ್ ಟನ್ ಕಬ್ಬಿಣದ ಅದಿರಿಗೆ ಡಿಎಂಜಿ ಬಲ್ಕ್ ಅಥವಾ ಟ್ರಾನ್ಸಿಟ್ ಪರವಾನಗಿಗಳು ಇರಲಿಲ್ಲ ಎಂಬುದು ಇ.ಡಿ ತನಿಖೆಯಿಂದ ತಿಳಿದು ಬಂದಿದೆ.
ಇದೇ ವೇಳೆ, ಎಸ್‌ವಿಕೆ ಮಿನರಲ್ಸ್ ಸಂಸ್ಥೆಯಿಂದ ಅಕ್ರಮವಾಗಿ ಗಣಿಗಾರಿಕೆ ಮಾಡಲಾದ 56,081.43 ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಅರ್ಷದ್ ಎಕ್‌ಸೆೆರ್ಟ್ ವೆವ್‌ಗೆ ಪೂರೈಸಿರುವುದೂ ಪತ್ತೆಯಾಗಿದೆ. ಈ ಅದಿರನ್ನು ಅರ್ಷದ್ ಎಕ್‌ಸೆೆರ್ಟ್ ಸಂಸ್ಥೆ ಚೀನಾಕ್ಕೆ ರಫ್ತು ಮಾಡಿರುವುದಾಗಿ ಇ.ಡಿ ಪತ್ತೆ ಮಾಡಿದೆ.
ಅಕ್ರಮದ ಹಣದಲ್ಲಿ ಆಸ್ತಿ ಖರೀದಿ:
ಅಕ್ರಮ ಕಬ್ಬಿಣದ ಅದಿರು ವ್ಯಾಪಾರದಿಂದ ಬಂದ ಹಣದ ಒಂದು ಭಾಗದಿಂದ ಎಸ್‌ವಿಕೆ ಮಿನಲ್ಸ್ ಸಂಸ್ಥೆಯ ಪಾಲುದಾರರು ಸ್ಥಿರಾಸ್ತಿ ಖರೀದಿಸಲು ಬಳಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಈ ಹಿನ್ನೆಲೆಯಲ್ಲಿ ಶ್ಯಾಮರಾಜ್ ಸಿಂಗ್ ಮತ್ತು ಬಿ.ಎಸ್. ನಂದಕುಮಾರ್ ಸಿಂಗ್ ಅವರ ಹೆಸರಿನಲ್ಲಿದ್ದ ನಾಲ್ಕು ಸ್ಥಿರಾಸ್ತಿಗಳನ್ನು ಜಪ್ತಿ ಮಾಡಲಾಗಿದೆ. ಈ ಪ್ರಕರಣದ ತನಿಖೆ ಮುಂದುವರೆದಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.