20 ವರ್ಷಗಳ ರಸ್ತೆ ಸಂಕಟ road misery

20 ವರ್ಷಗಳ ರಸ್ತೆ ಸಂಕಟ road misery
20 ವರ್ಷಗಳ ರಸ್ತೆ ಸಂಕಟ road misery
Published on
ಶ್ರೀನಿವಾಸಪುರ: ತಾಲೂಕಿನ ಲಕ್ಷಿ$್ಮಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾತಕೋಟೆ ಗ್ರಾಮಸ್ಥರು ಕಳೆದ 20 ವರ್ಷಗಳಿಂದ ರಸ್ತೆ ಸೌಕರ್ಯವಿಲ್ಲದೆ ಪರದಾಡುತ್ತಿದ್ದು, ಆಡಳಿತ ಯಂತ್ರದ ರ್ನಿಲಕ್ಷ$್ಯ ಮತ್ತು ವ್ಯಕ್ತಿಗಳ ಅಡ್ಡಿಯಿಂದಾಗಿ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.road misery
ಗ್ರಾಮದ 100ಕ್ಕೂ ಹೆಚ್ಚು ಕುಟುಂಬಗಳಿಗೆ ಲಕ್ಷಿ$್ಮಪುರ ಸಂಪರ್ಕಿಸಲು ಇರುವ ಕಚ್ಚಾ ಕಾಲುದಾರಿಯೇ ಏಕೈಕ ಮಾರ್ಗ. ಈಗಾಗಲೇ ಈ ಮಾರ್ಗದಲ್ಲಿ ಅರ್ಧಕ್ಕೆ ರಸ್ತೆ ನಿರ್ಮಾಣವಾಗಿದ್ದು, ಇನ್ನುಳಿದ ರಸ್ತೆಗೆ ಕೆಲವರ ತಕರಾರು ಎತ್ತಿ ರಸ್ತೆ ನಿಮಾರ್ಣಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಇದರ ಪರಿಣಾಮ ಸರ್ಕಾರದಿಂದ ಮಂಜೂರಾದ 60 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ.
ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಅವರ ಕೆಡಿಎಲ್​ಆರ್​ ನಿರ್ಮಿತಿ ಕೇಂದ್ರದ ಮೂಲಕ ರಸ್ತೆ ಕಾಮಗಾರಿ ಆರಂಭವಾಗಿ ಶೇ.80 ಪೂರ್ಣಗೊಂಡಿದೆ. ಆದರೆ, ಉಳಿದ ಭಾಗದಲ್ಲಿ ಸ್ಥಳಿಯರು ಅಡ್ಡಿಪಡಿಸುತ್ತಿರುವುದರಿಂದ ಕಾಮಗಾರಿ ಸಾಧ್ಯವಾಗುತ್ತಿಲ್ಲ. ಈ ಹಿಂದೆ ತಹಸೀಲ್ದಾರ್​ ಕಚೇರಿ ಎದುರು ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಸರ್ವೇ ನಂ.152ರಲ್ಲಿ ಪೂರ್ವಿಕರ ಕಾಲದಿಂದಲೂ 8 ಅಡಿ ಅಗಲದ ರಸ್ತೆ ಇರುವುದನ್ನು ನಕ್ಷೆಯಲ್ಲಿ ಗುರುತಿಸಲಾಗಿದೆ. ಸಂಬಂಧಪಟ್ಟ ಕಂದಾಯ, ಸರ್ವೇ ಮತ್ತು ಪೊಲೀಸ್​ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಮೂಲ ದಾಖಲೆಗಳ ಆಧಾರದ ಮೇಲೆ ರಸ್ತೆ ವಿವಾದ ಬಗೆಹರಿಸಿ, ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಕುರಿತು ತಹಸೀಲ್ದಾರ್​ ಸುಧೀಂದ್ರ ಅವರು ಈಗಾಗಲೇ ಸ್ಥಳ ಪರಿಶೀಲನೆ ನಡೆಸಿದ್ದು, ಕೂಡಲೇ ಅಧಿಕಾರಿಗಳು ಕಾಳಜಿವಹಿಸಿ ನ್ಯಾಯ ಒದಗಿಸಿಕೊಡಬೇಕು ಎಂದು ಚಂದ್ರಕಲಾ, ನಾರಾಯಣಸ್ವಾಮಿ, ಜಯರಾಮರೆಡ್ಡಿ, ಶಾಂತಮ್ಮ, ತಿಮ್ಮಾರೆಡ್ಡಿ, ಚಂದ್ರಕಾಂತ್​, ಆನಂದರೆಡ್ಡಿ, ಶ್ರೀನಿವಾಸ್​, ಪ್ರವಿಣ್​ ಕುಮಾರ್​ ಸೇರಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net