ಅಕ್ರಮವಾಗಿ ಮೊರಂ ಸಾಗಿಸುತ್ತಿದ್ದ 2 ಟಿಪ್ಪರ್​, ಜೆಸಿಬಿ ವಶ

2 ಟಿಪ್ಪರ್​ ಹಾಗೂ ಜೆಸಿಬಿ ವಶ
2 ಟಿಪ್ಪರ್​ ಹಾಗೂ ಜೆಸಿಬಿ ವಶ
Published on
ಧಾರವಾಡ: ಅಕ್ರಮವಾಗಿ ಮೊರಂ ಸಾಗಣೆ ಮಾಡುತ್ತಿದ್ದ ಸ್ಥಳಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಶುಕ್ರವಾರ ದಾಳಿ ಮಾಡಿ 2 ಟಿಪ್ಪರ್​ ಹಾಗೂ ಜೆಸಿಬಿಯನ್ನು ವಶಪಡಿಸಿಕೊಂಡಿದ್ದಾರೆ.
ತಾಲೂಕಿನ ಬೇಲೂರು ಗ್ರಾಮದ ಸರ್ಕಾರಿ ಗುಡ್ಡದಲ್ಲಿ (ಗೈರಾಣ ಸರ್ವೇ ನಂ. 355) ಜೆಸಿಬಿ, ಟಿಪ್ಪರ್​ ಬಳಸಿ ಮೊರಂ ಸಾಗಣೆ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ ಮಹೇಶ ಗೌಡನಾಯ್ಕರ್​ ಹಾಗೂ ತಂಡ ಮತ್ತು ಬೇಲೂರು ಗ್ರಾಮ ಆಡಳಿತಾಧಿಕಾರಿ ಸಾವಿತ್ರಿ ದೊಣ್ಣಿ ನೇತೃತ್ವದಲ್ಲಿ ದಾಳಿ ಮಾಡಿದೆ. 2 ಟಿಪ್ಪರ್​ ಮತ್ತು ಜೆಸಿಬಿಯನ್ನು ಜಪ್ತಿ ಮಾಡಿ ಗರಗ ಪೊಲೀಸ್​ ಠಾಣೆಗೆ ಒಪ್ಪಿಸಿ ಪ್ರಕರಣ ದಾಖಲಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net