ಪ್ರಸ್ತಾವಿತ ನಿಯಮಗಳ ಪ್ರಕಾರ, ಸಾಮಾನ್ಯ ಅರ್ಹತೆ, ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ಅಡಿಯಲ್ಲಿ ನೇರ ನೇಮಕಾತಿಯಲ್ಲಿ ಖಾಲಿ ಹುದ್ದೆಗಳಲ್ಲಿ ಶೇ.2 ಕ್ರೀಡಾ ಸಾಧಕರಿಗೆ ಮೀಸಲಿಡಲಾಗುತ್ತದೆ. ಕ್ರೀಡಾ ಸಾಧಕ ಎಂದರೆ ಕನಿಷ್ಠ 10ವರ್ಷಗಳ ಕಾಲ ಕರ್ನಾಟಕದಲ್ಲಿ ವಾಸ ಆಗಿರಬೇಕು. ಕನಿಷ್ಠ 1 ರಾಷ್ಟ್ರೀಯ ಚಾಂಪಿಯನ್‌ಶಿಪ್ ಅಥವಾ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ರಾಜ್ಯದ ಪ್ರತಿನಿಧಿಸಿರಬೇಕು. ಅಥ್ಲೆಟಿಕ್ಸ್, ಕ್ರಿಕೆಟ್, ಹಾಕಿ, ಫುಟ್ಬಾಲ್, ಬ್ಯಾಡ್ಮಿಂಟನ್, ಕುಸ್ತಿ, ಬಾಕ್ಸಿಂಗ್, ಚೆಸ್, ಸೈಕ್ಲಿಂಗ್, ಈಜು, ಕಬಡ್ಡಿ, ವಾಲಿಬಾಲ್, ವೇಟ್ ಲಿಫ್ಟಿಂಗ್ ಮತ್ತು ಟೆನಿಸ್ ಸೇರಿದಂತೆ 34 ಕ್ರೀಡಾ ವಿಭಾಗಗಳನ್ನು ಒಳಗೊಂಡಿವೆ.