ಫೆ.22ರಿಂದ 2 ದಿನ ಕೆನರಾ ಉತ್ಸವ; ಸಿಎಸ್‌ಆರ್ ಅಭಿಯಾನದಡಿ ಕಾರ್ಯಕ್ರಮ

ಕೆನರಾ ಬ್ಯಾಂಕ್ ಸಿಎಸ್‌ಆರ್ ಅಭಿಯಾನದಡಿ ಕೆನರಾ ಉತ್ಸವ 2026 ಅನ್ನು ಆಯೋಜಿಸಿ
ಕೆನರಾ ಬ್ಯಾಂಕ್ ಸಿಎಸ್‌ಆರ್ ಅಭಿಯಾನದಡಿ ಕೆನರಾ ಉತ್ಸವ 2026 ಅನ್ನು ಆಯೋಜಿಸಿ
Published on

ಪ್ರಮುಖ ಮುಖ್ಯಾಂಶಗಳು

  • ಫೆ.22ರಿಂದ 2 ದಿನ ಕೆನರಾ ಉತ್ಸವ
  • ಸಿಎಸ್‌ಆರ್ ಅಭಿಯಾನದಡಿ ಕಾರ್ಯಕ್ರಮ
  • ಆಹಾರ ಮೇಳ, ಕರಕುಶಲ ವಸ್ತುಗಳ ಪ್ರದರ್ಶನ, ಮಾರಾಟ

ಕೆನರಾಬ್ಯಾಂಕ್ ಸಿಎಸ್‌ಆರ್ ಅಭಿಯಾನದಡಿಕೆನರಾ ಉತ್ಸವ 2026ಅನ್ನು ಆಯೋಜಿಸಿದ್ದು,ಮಹಿಳೆಯರು ಮತ್ತುಸ್ಥಳೀಯ ಕುಶಲಕರ್ಮಿಗಳನ್ನುಸಬಲೀಕರಣಗೊಳಿಸುವುದರ ಜೊತೆಗೆಉದ್ಯಮಶೀಲತೆ ಮತ್ತು ಕಲೆಯನ್ನುಪ್ರೋತ್ಸಾಹಿಸಲು ಕಾರ್ಯಕರಮಹಮ್ಮಿಕೊಂಡಿದೆ.

ಎರಡುದಿನಗಳ ಕಾರ್ಯಕ್ರಮವು ಫೆ.22(ಭಾನುವಾರ)ಮತ್ತು 23(ಸೋಮವಾರ)ರಂದು ಜಯಮಹಲ್ಕನ್ವೆನ್ಷನ್ ಹಾಲ್‌ನಲ್ಲಿ ಬೆಳಗ್ಗೆ10 ರಿಂದರಾತ್ರಿ 8 ರವರೆಗೆನಡೆಯಲಿದೆ.

ಮಹಿಳಾಸಬಲೀಕರಣವನ್ನು ಮೊದಲಿನಿಂದಲೂಪ್ರೋತ್ಸಾಹಿಸುತ್ತಾ ಬಂದಿರುವ ಕೆನರಾ ಬ್ಯಾಂಕ್ ಸಿಎಸ್‌ಆರ್ನಿಧಿಯ ಸದ್ಭಳಕೆಯನ್ನು ಕೆನರಾಉತ್ಸವದ ಮೂಲಕ ಮಾಡುತ್ತಿದೆ.

ಉತ್ಸವದಲ್ಲಿಮಹಿಳಾ ಉದ್ಯಮಿಗಳು ಮತ್ತುಕುಶಲಕರ್ಮಿಗಳಿಗೆ ತಮ್ಮ ಕೌಶಲಪ್ರದರ್ಶಿಸಲು ಹಾಗೂ ತಾವು ತಯಾರಿಸಿದಉತ್ಪನ್ನಗಳನ್ನು ಪ್ರಚಾರ ಮಾಡಲುವೇದಿಕೆ ಕಲ್ಪಿಸಿಕೊಡಲಾಗಿದೆ.

ಎರಡುದಿನಗಳ ಪ್ರದರ್ಶನದಲ್ಲಿ ಸಾವಯವಆಹಾರ ಮೇಳ, ವಿವಿಧಕರಕುಶಲ ವಸ್ತುಗಳ ಪ್ರದರ್ಶನಮತ್ತು ಮಾರಾಟ,ಲೈವ್ ಮೆಹೆಂದಿಕೌಂಟರ್‌ಗಳಲ್ಲಿ ಪ್ರಾಯೋಗಿಕಅನುಭವವನ್ನು ಪಡೆಯಬಹುದು.ಹೆಚ್ಚಿನ ಮಾಹಿತಿಗೆ ದೂ: 8388820313, 9591380816ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net