ರಾಜಿ ಮೂಲಕ 1925 ಪ್ರಕರಣ ಇತ್ಯರ್ಥ

ಬಸವಕಲ್ಯಾಣದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್​ನಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲಿ ವಿಚ್ಛೇದನ ಬಯಸಿದ ದಂಪತಿ ರಾಜಿ ಸಂದಾನದ ಮೂಲಕ ಮತ್ತೆ ಒಂದಾದರು.
ಬಸವಕಲ್ಯಾಣದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್​ನಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲಿ ವಿಚ್ಛೇದನ ಬಯಸಿದ ದಂಪತಿ ರಾಜಿ ಸಂದಾನದ ಮೂಲಕ ಮತ್ತೆ ಒಂದಾದರು.
Published on

ಪ್ರಮುಖ ಮುಖ್ಯಾಂಶಗಳು

  • ಬಸವಕಲ್ಯಾಣದಲ್ಲಿ ರಾಷ್ಟ್ರೀಯ ಲೋಕ ಅದಾಲತ್​
ಬಸವಕಲ್ಯಾಣ: ನಗರದ ನ್ಯಾಯಾಲಯದ ಆವಣದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್​ನಲ್ಲಿ ನಾಲ್ಕು ನ್ಯಾಯಾಲಯಗಳಲ್ಲಿ ಒಟ್ಟು 2685 ಪ್ರಕರಣಗಳ ಪೈಕಿ ನ್ಯಾಯಾಧೀಶರ ಸಮಕ್ಷಮದಲ್ಲಿ ರಾಜಿ ಸಂಧಾನ ಮೂಲಕ 1925 ಪ್ರಕರಣ ಇತ್ಯರ್ಥಗೊಳಿಸಲಾಯಿತು.
ಕೌಟುಂಬಿಕ ಕಲಹ, ಆಸ್ತಿ ಸಂಬಂಧ ಅಣ್ಣ&ತಮ್ಮರ ನಡುವೆ ನಡೆಯುತ್ತಿದ್ದ ಪ್ರಕರಣಗಳು, ಮೋಟಾರು ವಾಹನ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣ ಸೇರಿ ನಾನಾ ಪ್ರಕರಣಗಳನ್ನು ರಾಜಿ ಸಂದಾನದ ಮೂಲಕ ಲೋಕ ಅದಾಲತ್​ನಲ್ಲಿ ಇತ್ಯರ್ಥಪಡಿಸಲಾಗಿದೆ.
ಸಂಚಾರಿ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದ 1770 ಪ್ರಕರಣ, ಆರ್​ಟಿಒ ಇಲಾಖೆಗೆ ಸೇರಿದ 1, ನಗರಸಭೆಗೆ ಸಂಬಂಧಿಸಿದ 79 ಪ್ರಕರಣ, 65 ಬ್ಯಾಂಕ್​ ಪ್ರಕರಣಗಳನ್ನು ಇತ್ಯರ್ಥಗೊಳಿಸಿ ಒಟ್ಟು 2.35 ಕೋಟಿ 54323 ರೂ. ದಂಡದ ವಿಧಿಸಲಾಗಿದೆ. ಮದುವೆಯಾದ ಮೂರು ವರ್ಷದಲ್ಲಿಯೇ ಕ್ಷುಲ್ಲಕ ಕಾರಣಕ್ಕಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ದಂಪತಿಗೆ ಮನವೊಲಿಸಿ ಒಂದು ಮಾಡಲಾಯಿತು.
ಎರಡನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಯಶವಂತ ಆರ್​. ತವಾರೆ ಮಾತನಾಡಿ, ಸಣ್ಣ, ಸಣ್ಣ ವಿಷಯಗಳಿಗೆ ಜಗಳ, ಮನಸ್ತಾಪದಿಂದ ನ್ಯಾಯಾಲದ ಮೆಟ್ಟಿಲು ಹತ್ತಿ ಹಣ ಮತ್ತು ಸಮಯ ವ್ಯರ್ಥ ಮಾಡಿಕೊಳ್ಳುವುದು ಸರಿಯಲ್ಲ, ಪರಸ್ಪರ ಸಹಕಾರ ಹಾಗೂ ತಿಳಿವಳಿಕೆಯೊಂದಿಗೆ ಜೀವನ ನಡೆಸಿದಲ್ಲಿ ನೆಮ್ಮದಿಯಿಂದ ಬದುಕಬಹುದು ಎಂದರು.
ಹಿರಿಯ ಸಿವಿಲ್​ ಮತ್ತು ಜೆಎಂಎಫ್​ಸಿ ನ್ಯಾಯಾಲಯದ ನ್ಯಾಯಾಧೀಶ ಹಣಮಂತರಾವ ಕುಲ್ಕರ್ಣಿ, ಪ್ರಧಾನ ಸಿವಿಲ್​ ಮತ್ತು ಜೆಎಂಎಫ್​ಸಿ ನ್ಯಾಯಾಲಯದ ನ್ಯಾಯಾಧೀಶ ಜ್ಞಾನೇಶ್ವರ ವಿಠ್ಠಲ್​ ಮಾಳಗಿ, ಹೆಚ್ಚುವರಿ ಸಿವಿಲ್​ ಮತ್ತು ಜೆಎಂಎಫ್​ಸಿ ನ್ಯಾಯಾಲಯದ ಶ್ರೇಯಾ ಎಸ್​ ಉತ್ತ್ತುರೆ, ಸರ್ಕಾರಿ ಅಭಿಯೋಜಕ ಬಸವಂತರಡ್ಡಿ, ಸರ್ಕಾರಿ ಸಹಾಯಕ ಅಭಿಯೋಜಕರಾದ ಬಾಲಾಜಿ ಅದೆಪ್ಪ, ಜಗದೇವಿ ಚೊಂಡೆ, ಅರವಿಂದ ಸಿಂಗೋಡೆ, ನ್ಯಾಯವಾದಿಗಳ ಸಂಘದ ತಾಲೂಕು ಅಧ್ಯಕ್ಷ ಭೀಮಾಶಂಕರ ಕುರಕೊಟೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net