ರಾಜ್ಯದಲ್ಲಿ 1.9 ಕೋಟಿ ಸಹಿ ಸಂಗ್ರಹ Congress

ಮುಳಬಾಗಿಲಿನ ಕಾಂಗ್ರೆಸ್​ Congress ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಎಐಸಿಸಿ ಕಾರ್ಯದರ್ಶಿ ಅಭಿಷೇಕ್​ ದತ್​ ಮಾತನಾಡಿದರು.
ಮುಳಬಾಗಿಲಿನ ಕಾಂಗ್ರೆಸ್​ Congress ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಎಐಸಿಸಿ ಕಾರ್ಯದರ್ಶಿ ಅಭಿಷೇಕ್​ ದತ್​ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಅಭಿಷೇಕ್​ ದತ್​ ಹೇಳಿಕೆ
ಮುಳಬಾಗಿಲು: ಕಾಂಗ್ರೆಸ್​ ವರಿಷ್ಠ ರಾಹುಲ್​ ಗಾಂಧಿ ಸೂಚನೆ ಮೇರೆಗೆ ಮತ ಕಳವು ಖಂಡಿಸಿ ದೇಶ್ಯಾದ್ಯಂತ ಪ್ರತಿಭಟನೆ ಹಾಗೂ ಸಹಿ ಸಂಗ್ರಹ ಅಭಿಯಾನದ ಮೂಲಕ ಮತದಾರರನ್ನು ಮತ್ತು ಮತಗಟ್ಟೆ ಹಂತದ ಕಾಂಗ್ರೆಸ್​ ಕಾರ್ಯಕರ್ತರನ್ನು ಎಚ್ಚರಿಸುವ ಕೆಲಸವಾಗುತ್ತಿದ್ದೆ ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಅಭಿಷೇಕ್​ ದತ್​ ಹೇಳಿದರು.
ಮುಳಬಾಗಿಲು ಕಾಂಗ್ರೆಸ್​ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ Congress ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ ಓಟ್​ ಚೋರ್​ ಮಾಡಿ ಅಧಿಕಾರಕ್ಕೆ ಬಂದಿದೆ. ಈ ಬಗ್ಗೆ ಮುಳಬಾಗಿಲಿನಲ್ಲಿ 29 ಸಾವಿರ ಸಹಿ ಸಂಗ್ರಹಣೆ ಮಾಡಲಾಗಿದ್ದು, ರಾಜ್ಯದಲ್ಲಿ 1.9 ಕೋಟಿ ಸಹಿಗಳ ಸಂಗ್ರಹವಾಗಿದೆ. ರಾಹುಲ್​ ಗಾಂಧಿ ಆದೇಶಗಳನ್ನು ಪಕ್ಷದ ಮುಖಂಡರಿಂದ ಹಿಡಿದು ಎಲ್ಲ ಕಾರ್ಯಕರ್ತರು ಪಾಲನೆ ಮಾಡಿದಲ್ಲಿ, ಕಾಂಗ್ರೆಸ್​ ಅಧಿಕಾರಕ್ಕೆ ಬರುವುದು ಖಚಿತ ಎಂದರು.
ಕೆಪಿಸಿಸಿ ಉಪಾಧ್ಯಕ್ಷ ಎಂಎಲ್ಸಿ ನಾರಾಯಣಸ್ವಾಮಿ ಮಾತನಾಡಿ, ರಾಷ್ಟ್ರವನ್ನು ಬಿಜೆಪಿ ಮತ್ತು ಆರೆಸ್ಸೆಸ್​ ಕಪಿಮುಷ್ಠಿಯಿಂದ ಬಿಡಿಸಿಕೊಳ್ಳಲು ಕಾಂಗ್ರೆಸ್​ ಮತ್ತೆ ಅಧಿಕಾರಕ್ಕೆ ಬರಬೇಕು. ಬಿಜೆಪಿಗರೆ ಅಧಿಕಾರ ಬಿಟ್ಟು ತೊಲಗಿ, ಆರೆಸ್ಸೆಸಿಗರೇ ದೇಶ ಬಿಟ್ಟು ತೊಲಗಿ ಎಂಬ ಹೋರಾಟವನ್ನು ಕಾಂಗ್ರೆಸ್​ ಮಾಡಲಿದೆ ಎಂದು ಮಾಹಿತಿ ನೀಡಿದರು.
ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ಕೊನೆ ಕ್ಷಣದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ಕಾರಣ ಸಮಯದ ಅಭಾವದಿಂದ, ಮುಳಬಾಗಿಲು ಮೀಸಲು ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ವಿ. ಆದಿನಾರಾಯಣ, ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಕೆ.ವಿ. ಗೌತಮ್​ ಸೋಲು ಕಂಡಿದ್ದಾರೆ. ಅವರು ಸೋತರು ಪಕ್ಷದ ಕಾರ್ಯಕರ್ತರೊಂದಿಗೆ ಮತದಾರರೊಂದಿಗೆ ಸಂಪರ್ಕದಲ್ಲಿದ್ದು ಸ್ಪಂದನೆ ನೀಡುತ್ತಾರೆ. ಇಬ್ಬರೂ ಗೆದ್ದಿದ್ದರೆ ಮುಳಬಾಗಿಲು ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳಾಗುತ್ತಿದ್ದವು. ಈಗ ಇಲ್ಲಿನ ಶಾಸಕರು ಜೆಡಿಎಸ್​ ನವರಾಗಿರುವ ಕಾರಣ ಕಾಂಗ್ರೆಸ್​ ಕಾರ್ಯಕರ್ತರಿಗೆ ಸರಿಯಾಗಿ ಕೆಲಸ ಕಾರ್ಯಗಳು ಆಗುತ್ತಿಲ್ಲ ಎಂದು ದೂರಿದರು.
ಮುಖಂಡ ವಿ. ಆದಿನಾರಾಯಣ ಮಾತನಾಡಿ, ರಾಜ್ಯದ ಕಾಂಗ್ರೆಸ್​ ಸರ್ಕಾರ ನೀಡಿರುವ ಪಂಚ ಗ್ಯಾರಂಟಿಗಳ ಜತೆಗೆ ತಾಲೂಕು ಕಾಂಗ್ರೆಸ್​ನಿಂದ ವೈಯಕ್ತಿಕವಾಗಿ ಮತ್ತೆ ಐದು ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದಿದ್ದು, ಕ್ಷೇತ್ರದಲ್ಲಿ ಒಟ್ಟು 10 ಕಾಂಗ್ರೆಸ್​ ಗ್ಯಾರಂಟಿಗಳನ್ನು ಮನೆ ಮನೆಗೆ ತಲುಪಿಸುವ ಕಾಯಕ ಮಾಡುತ್ತಿದ್ದೇನೆ ಎಂದರು.
ಕೆ.ವಿ. ಗೌತಮ್​ ಮಾತನಾಡಿ, ಮುಂಬರುವ ಆಗ್ನೇಯ ಪದವೀಧರ ಮತದಾರರ ಕ್ಷೇತ್ರದಿಂದ ಕಾಂಗ್ರೆಸ್​ ಅಭ್ಯರ್ಥಿ ಗೆಲ್ಲುವಂತೆ ತಾಲೂಕಿನಲ್ಲಿರುವ ಪಕ್ಷದ ಬೆಂಬಲಿತ ಎಲ್ಲ ಪದವೀಧರ ಮತದಾರರನ್ನು ಮತಗಟ್ಟೆ ಹಂತದ ಕಾರ್ಯಕರ್ತರು ಗುರುತಿಸಿ ನೋಂದಣಿ ಮಾಡಿಸಬೇಕೆಂದು ಸಲಹೆ ನೀಡಿದರು.
ರಾಜ್ಯ ಜೈವಿಕ ಇಂಧನ ಮಂಡಳಿ ಮಾಜಿ ಉಪಾಧ್ಯಕ್ಷ ಜಿ. ರಾಮಲಿಂಗಾರೆಡ್ಡಿ, ಕೆಪಿಸಿಸಿ ಸದಸ್ಯ ಉತ್ತನೂರು ಶ್ರೀನಿವಾಸ್​, ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷ ಲಕ್ಷಿ$್ಮನಾರಾಯಣ, ನಗರ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಅಮಾನುಲ್ಲ, ಪಿಎಲ್​ಡಿ ಬ್ಯಾಂಕ್​ ಅಧ್ಯಕ್ಷ ಕೊತ್ತೂರು ಗೆಂಗಿರೆಡ್ಡಿ, ಮಾಜಿ ಅಧ್ಯಕ್ಷ ಆರ್​.ಆರ್​. ರಾಜೇಂದ್ರ ಗೌಡ, ಟಿಎಪಿ ಪಿಎಂಎಸ್​ ಮಾಜಿ ಅಧ್ಯಕ್ಷ ಅಲಂಗೂರು ಶಿವಣ್ಣ, ಮುಖಂಡರಾದ ಕೊತ್ತೂರು ಆರ್​. ಆಂಜನೇಯಲು, ಎಂ.ಗೋಪಾಲ್​, ಶಂಕರನಾರಾಯಣ, ಮುನಿಸ್ವಾಮಿಗೌಡ, ಉಮಾಶಂಕರ್​, ಮಂಜುನಾಥ್​, ಸುಬ್ರಹ್ಮಣಿ, ವೆಂಕಟೇಶ್​, ಸುಹಾಸ್​, ಶ್ರೀನಿವಾಸಗೌಡ, ಮುನಿರಾಜು, ಜಬಿವುಲ್ಲಾ ಇದ್ದರು.
ಕೆಪಿಸಿಸಿ ಉಪಾಧ್ಯಕ್ಷ ಎಂಎಲ್ಸಿ ನಾರಾಯಣಸ್ವಾಮಿ, ಕಾರ್ಯದರ್ಶಿ ವೆಂಕಟೇಶ್​, ಮುಖಂಡರಾದ ವಿ. ಆದಿನಾರಾಯಣ, ಕೆ.ವಿ. ಗೌತಮ್​ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net