18 ವರ್ಷದವರು ಅರ್ಜಿ ಸಲ್ಲಿಸಿ / VIJAYAPUR

ವಿಜಯಪುರದ 7ನೇ ವಾರ್ಡ್​ನ ನವಗ್ರಹಗಳ ದೇವಾಲಯದ ಬಳಿ ಬಿಎಲ್​ಒಗಳು ಪ್ರತಿ ಮನೆ ಮನೆಗೆ ಭೇಟಿ ನೀಡಿ ನೂತನ ಮತದಾರರ ಪರಿಷ್ಕರಣೆ ಫಾಮ್​ರ್ ಅನ್ನು ವಿತರಿಸಿದರು. ಪುರಸಭೆ ಸದಸ್ಯ ಎಂ.ಸತೀಶ್​ ಕುಮಾರ್​, ಮಹಾಂತಿನ ಮಠದ ಕಾರ್ಯದರ್ಶಿ ವಿ.ವಿಶ್ವನಾಥ್​, ಹನುಮಂತಪ್ಪ, ಎನ್​.ಪ್ರಭುದೇವ್​, ವಾರ್ಡ್​ನ ಪ್ರಮುಖರು, ಸಾರ್ವಜನಿಕರು ಇದ್ದರು.

Published on
ವಿಜಯಪುರ : ಕೇಂದ್ರ ಚುನಾವಣಾ ಆಯೋಗವು ನಡೆಸುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು. ಬಿಎಲ್​ಒಗಳು ನೀಡುವ ಅರ್ಜಿಗಳನ್ನು ಸೂಕ್ಷ್ಮವಾಗಿ ಗಮನಿಸಿ, ಇತ್ತೀಚಿನ ಭಾವಚಿತ್ರಗಳೊಂದಿಗೆ ಭರ್ತಿ ಮಾಡಿ ನೀಡುವ ಮೂಲಕ ಮುಂದಿನ ದಿನಗಳಲ್ಲಿ ಚುನಾವಣಾ ಪಟ್ಟಿಯಿಂದ ಹೆಸರು ಕೈಬಿಟ್ಟು ಹೋಗದಂತೆ ಜಾಗ್ರತೆ ವಹಿಸಬೇಕು ಎಂದು ಪುರಸಭೆ ಸದಸ್ಯ ಎಂ.ಸತೀಶ್​ ಕುಮಾರ್​ ಹೇಳಿದರು.
ಪಟ್ಟಣದ 7ನೇ ವಾರ್ಡ್​ನ ನವಗ್ರಹಗಳ ದೇವಾಲಯದ ಬಳಿ ಬಿಎಲ್​ಒಗಳು ಪ್ರತಿ ಮನೆ ಮನೆಗೆ ಭೇಟಿ ನೀಡಿ ನೂತನ ಮತದಾರರ ಗಣತಿ ಫಾಮ್​ರ್ ವಿತರಿಸಿ ಮಾತನಾಡಿದರು.
ಬಿಎಲ್​ಒ ಲತಾ ಮಾತನಾಡಿ, ಸಾರ್ವಜನಿಕರು ಗಣತಿಯ ನೂತನ ಅರ್ಜಿಗಳನ್ನು ಭರ್ತಿ ಮಾಡಲು ಸೂಕ್ತ ಮಾರ್ಗದರ್ಶನ ಹಾಗೂ ಸಹಾಯ ಮಾಡಲಿದ್ದೇವೆ. ಪ್ರಸ್ತುತ ನಮ್ಮ ಬಳಿ 2002ರ ಮತದಾರರ ಪಟ್ಟಿಯು ಲಭ್ಯವಿದೆ. ಜತೆಗೆ ಕುಟುಂಬದಲ್ಲಿ 18 ವರ್ಷ ಮೇಲ್ಪಟ್ಟ ಸದಸ್ಯರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲು ಫಾಮ್​ರ್ ನಂಬರ್​ 6ಅನ್ನು ಭರ್ತಿ ಮಾಡಿ ನೀಡಬೇಕು ಎಂದು ಮಾಹಿತಿ ನೀಡಿದರು.
ಪ್ರಮುಖ ಅಂಶಗಳು
* ಅಕ್ಟೋಬರ್​ 1ಕ್ಕೆ 18 ವರ್ಷ ತುಂಬುವ ಯುವಕ-ಯುವತಿಯರು ಫಾಮ್​ರ್ ನಂಬರ್​ 6ಅನ್ನು ಭರ್ತಿ ಮಾಡಬೇಕು.
* ಕುಟುಂಬದಲ್ಲಿ ಯಾರಾದರೂ ಮೃತಪಟ್ಟಿದ್ದಲ್ಲಿ ಅವರ ಹೆಸರನ್ನು ಪಟ್ಟಿಯಿಂದ ತೆಗೆಯಲು ಫಾಮ್​ರ್ ನಂ.7ಅನ್ನು ಸಲ್ಲಿಸಬೇಕು.
* ಒಂದೆಡೆಯಿಂದ ಮತ್ತೊಂದೆಡೆಗೆ ಸ್ಥಳಾಂತರವಾಗಿರುವ ಅಥವಾ ತಿದ್ದುಪಡಿ ಇರುವ ಮತದಾರರು ಫಾರಂ ನಂ.8ರ ಮೂಲಕ ವಿವರ ಭರ್ತಿ ಮಾಡಿಕೊಡಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net