

ಪ್ರಮುಖ ಮುಖ್ಯಾಂಶಗಳು
'ಸಂಜೆ 5 ಅಥವಾ 6 ಗಂಟೆಗೆ ಕಚೇರಿಯಿಂದ ಹೊರಟರೂ
ಮನೆಗೆ ತಲುಪಲು ಹೆಚ್ಚು
ಸಮಯ ಬೇಕಾಗುತ್ತದೆ. ಟ್ರಾಫಿಕ್ನಲ್ಲೇ ಅರ್ಧ ಜೀವನ ಕಳೆಯುತ್ತಿರುವುದರಿಂದ ವೈಯಕ್ತಿಕ ಜೀವನದ ಮೇಲೆ ಸಮಯ ಕೊಡಲಾಗುತ್ತಿಲ್ಲ. ಬದಲಾಗಿ ಮತ್ತೆ
ಮರುದಿನ ಕಚೇರಿಗೆ ತಡವಾಗಿ ಬರುವಂತಾಗುತ್ತದೆ. ಮಳೆ ಅಥವಾ ಅಪಘಾತ ಮತ್ತೇನೋ ಕಾರಣಗಳಿಂದ ಟ್ರಾಫಿಕ್ ಉಂಟಾಗಿದೆ ಎನ್ನುವ ಕಾರಣ ಇಲ್ಲದಿದ್ದರೂ ಸಹ ಬೆಂಗಳೂರಿನಲ್ಲಿ
ಮಧ್ಯಾಹ್ನ 4 ಗಂಟೆಗೆ ವೈಟ್‌ಫೀಲ್ಡ್‌ನಿಂದ ಎಚ್‌ಎಸ್‌ಆರ್ ಲೇಔಟ್‌ಗೆ 17 ಕಿ.ಮೀ ದೂರ ಪ್ರಯಾಣಿಸುವಾಗಲೂ 2 ಗಂಟೆ ಬೇಕಾಗುತ್ತದೆ' ಎಂದು ಹೇಳಿದರು.
'ನಾವು ಈ ನಗರದಲ್ಲಿದ್ದುಕೊಂಡು ಒಳ್ಳೆ ಕೆಲಸ ಮಾಡುವ ಸಾಮರ್ಥ್ಯ ಅಥವಾ ಹುಮ್ಮಸ್ಸನ್ನು ಟ್ರಾಫಿಕ್ನಲ್ಲಿ ಕಳೆಯುವ ಆಯಾಸದಿಂದಲೇ ಕಳೆದುಕೊಳ್ಳುತ್ತಿದ್ದೇವೆ. ನಮ್ಮ ಸುತ್ತಲೂ ಪ್ರತಿ ದಿನ ಇಷ್ಟೊಂದು ಶಬ್ಧ ಮತ್ತು ಗದ್ದಲದಿಂದ ತುಂಬಿ ಹೋಗಿರುತ್ತದೆ ಎನ್ನುವುದನ್ನು ಯೋಚಿಸುವಷ್ಟು ನಮಗೆ ಸಮಯ ಇರೋದಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು.
ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಉದ್ಯೋಗಿಗಳ ಉತ್ಪಾದಕತೆ ಮತ್ತು ಸಾಮರ್ಥ್ಯ ನಾಶವಾಗುತ್ತಿದೆ ಎಂದು ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರು ಈ ಮಾತಿಗೆ ಧ್ವನಿಗೂಡಿಸಿದ್ದಾರೆ, (ಏಜೆನ್ಸೀಸ್).