ಹುಣಸಿನಹಳ್ಳಿಯಲ್ಲಿ 15 ಮಕ್ಕಳು ಎಲ್​ಕೆಜಿಗೆ ದಾಖಲು govt LKG

ಹುಣಸಿನಹಳ್ಳಿಯಲ್ಲಿ 15 ಮಕ್ಕಳು ಎಲ್​ಕೆಜಿಗೆ ದಾಖಲು govt LKG
ಹುಣಸಿನಹಳ್ಳಿಯಲ್ಲಿ 15 ಮಕ್ಕಳು ಎಲ್​ಕೆಜಿಗೆ ದಾಖಲು govt LKG
Published on
ಬಂಗಾರಪೇಟೆ: ತಾಲೂಕಿನ ಹುಣಸಿನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇದೇ ಮೊದಲ ಬಾರಿಗೆ ಎಲ್​ಕೆಜಿ ಪ್ರಾರಂಭಿಸಲಾಗಿದ್ದು, ಗ್ರಾಮಸ್ಥರು, ಪಾಲಕರಲ್ಲಿ ಸಂತಸ ಮನೆ ಮಾಡಿದೆ. govt LKG
ಈ ಹೊಸ ಶೈಕ್ಷಣಿಕ ಉಪಕ್ರಮದ ಮೂಲಕ ಪುಟ್ಟ ಮಕ್ಕಳಿಗೆ ಬಾಲ್ಯದಿಂದಲೇ ಗುಣಮಟ್ಟದ ಶಿಕ್ಷಣ ದೊರೆಯುವ ಅವಕಾಶ ಸೃಷ್ಟಿಯಾಗಿದೆ. ಪ್ರಸ್ತುತ ಎಲ್​ಕೆಜಿ ತರಗತಿಗೆ ಒಟ್ಟು 15 ಮಕ್ಕಳು ದಾಖಲಾತಿ ಪಡೆದಿದ್ದು, ಶಾಲೆಯ ಮೊದಲ ದಿನವೇ ಸಮವಸ್ತ್ರ ಧರಿಸಿ ಉತ್ಸಾಹದಿಂದ ಶಾಲೆಗೆ ಆಗಮಿಸಿದ ದೃಶ್ಯ ಎಲ್ಲರ ಗಮನ ಸೆಳೆಯಿತು. ಮಕ್ಕಳ ಮುಖದಲ್ಲಿದ್ದ ಸಂತಸ ಹಾಗೂ ಕುತೂಹಲ ಶಿಕ್ಷಣದ ಮಹತ್ವ ಸಾರುವಂತಿತ್ತು.
ಮಕ್ಕಳಿಗೆ ಕುಳಿತುಕೊಳ್ಳಲು ಚೇರ್​ಗಳು, ವಿವಿಧ ಆಟದ ಸಾಮಗ್ರಿಗಳು, ಪಠ್ಯಪುಸ್ತಕಗಳು ಹಾಗೂ ಸಮವಸ್ತ್ರ ಉಚಿತವಾಗಿ ನೀಡಲಾಗಿದೆ. ಮಕ್ಕಳಿಗೆ ಪ್ರತ್ಯೇಕ ಕೊಠಡಿ ಮಾಡಲಾಗಿದ್ದು, ಅವರ ಆರೈಕೆ ಮತ್ತು ಕಲಿಕೆಯ ಜವಾಬ್ದಾರಿಗಾಗಿ ಶಿಕ್ಷಕರು ಹಾಗೂ ಆಯಾ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ಮಕ್ಕಳಿಗೆ ಸುರಕ್ಷಿತ ಹಾಗೂ ಸ್ನೇಹಪರ ವಾತಾವರಣದಲ್ಲಿ ಶಿಕ್ಷಣ ಪಡೆಯಲು ಅನುಕೂಲವಾಗಿದೆ.
ಶಾಲೆಯ ಪ್ರಾರಂಭೋತ್ಸವವನ್ನು ಗಾಪಂ ಮಾಜಿ ಸದಸ್ಯ ಶ್ರೀನಿವಾಸ್​ ಉದ್ಘಾಟಿಸಿದರು. ಪುಟ್ಟ ಮಕ್ಕಳೊಂದಿಗೆ ಸಂವಾದ ನಡೆಸಿದರು.
ಮುಖ್ಯಶಿಕ್ಷಕಿ ಪ್ರೇಮಾ ಮಾತನಾಡಿ, ಮಕ್ಕಳಿಗೆ ಬೆಳಗ್ಗೆ ಹಾಲು, ಮಧ್ಯಾಹ್ನ ಬಿಸಿಯೂಟ, ಸಂಜೆ ತಿಂಡಿಗಾಗಿ ಬಾಳೆಹಣ್ಣು ಅಥವಾ ಮೊಟ್ಟೆ ನೀಡಲಾಗುವುದು. ವಾರದಲ್ಲಿ ಎರಡು ದಿನ ಐರನ್​ ಮಾತ್ರೆ ಹಾಗೂ 6 ತಿಂಗಳಿಗೊಮ್ಮೆ ಜಂತುಹುಳು ನಿವಾರಣಾ ಮಾತ್ರೆ ನೀಡುವ ವ್ಯವಸ್ಥೆಯಿದೆ ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net