ಕ್ಯಾನ್ಸರ್ ತಜ್ಞೆ ಡಾ. ವಿಜಯಲಕ್ಷ್ಮಿ ದೇಶಮಾನೆ ಮಾತನಾಡಿ, ವೈದ್ಯಕೀಯ ವಿದ್ಯಾರ್ಥಿಗಳಿಗೆ ಶಸ್ತ್ರಚಿಕಿತ್ಸೆಯ ನೇರ ಪ್ರಾತ್ಯಕ್ಷಿಕೆಯಿಂದ ಕಲಿಕೆಯ ಜೊತೆಗೆ ಜ್ಞಾನವೃದ್ಧಿಯಾಗಲಿದೆ. ರೋಗಿಗಳಿಗೆ ಉತ್ತಮ ಶಸ್ತ್ರಚಿಕಿತ್ಸೆ ನೆಡೆಸಲು ಸಹಕಾರಿಯಾಗಲಿದ್ದು, ಇದರಿಂದ ವೈದ್ಯರಲ್ಲಿ ಪರಿಣಿತಿ, ಧೈರ್ಯ, ಚಿಕಿತ್ಸಾ ಕೌಶಲ್ಯ ವೃದ್ಧಿಯಾಗಲಿದೆ. ರೋಗಿಗಳು ದೇವರು, ವೈದ್ಯರು ಪೂಜಾರಿಗಳು, ಆಸ್ಪತ್ರೆ ಎಂಬುದು ದೇವಾಲಯವಿದ್ದಂತೆ. ರೋಗಿಗಳ ಸೇವೆ ದೇವರ ಸೇವೆಯಂತೆ. ವೈದ್ಯರು ವೃತ್ತಿಯಲ್ಲಿ ಸಾಕಷ್ಟು ಪರಿಣಿತಿ ಹೊಂದುವ ಮೂಲಕ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ ಎಂದ ಅವರು, ಈ ವೇಳೆ ತಮಗೆ ಸಂದ ಪದ್ಮಶ್ರೀ ಪ್ರಶಸ್ತಿಯನ್ನು ಕಿದ್ವಾಯಿ ಆಸ್ಪತ್ರೆ ಹಾಗೂ ರೋಗಿಗಳಿಗೆ ಅರ್ಪಿಸುತ್ತೇನೆ ಎಂದರು.