ಕ್ರೂಸರ್-ಲಾರಿ ಡಿಕ್ಕಿ ಮೂವರ ಸಾವು

ಮೂವರ ಸಾವು
ಮೂವರ ಸಾವು
Published on
ಚಿಕ್ಕೋಡಿ: ಕ್ರೂಸರ್ ಹಾಗೂ ಲಾರಿ ನಡುವೆ ಸೋಮವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯಕ್ಸಂಬಾ ಪಟ್ಟಣದ ಮೂವರು ಮೃತಪಟ್ಟರುವ ಘಟನೆ ಆಂಧ್ರಪ್ರದೇಶದ ಮಾರ್ಕಪುರಂ ಜಿಲ್ಲೆಯ ತಿಪ್ಪಾಯಪಾಲೆಂ ಬಳಿ ನಡೆದಿದೆ.
ತಾಲೂಕಿನ ಯಕ್ಸಂಬಾದ ಅಜಿತ್ ಸಾತ್ವರ (28), ಗೌರವ ಶಹಾ (40) ಹಾಗೂ ಅಲಕಾ ಶಿಂಧೆ (60) ಮೃತಪಟ್ಟವರು. ಶ್ರೀಶೈಲಂನ ಮಲ್ಲಿಕಾರ್ಜುನ ದರ್ಶನಕ್ಕೆಂದು ಯಕ್ಸಂಬಾ ಹಾಗೂ ಯಾದನವಾಡಿ ಗ್ರಾಮದ ಒಟ್ಟು 14 ಜನರು ಕ್ರೂಸರ್ ವಾಹನದಲ್ಲಿ ತೆರಳಿದ್ದರು. ದೇವರ ದರ್ಶನ ಮುಗಿಸಿಕೊಂಡು ಮರಳಿ ಬರುವಾಗ ಘಟನೆ ನಡೆದಿದೆ.
ಇನ್ನುಳಿದ 11 ಜನರು ಗಂಭೀರ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತದೇಹ ಗಳನ್ನು ಬುಧವಾರ ಸ್ವಗ್ರಾಮಕ್ಕೆ ತರುವ ನಿರೀಕ್ಷೆ ಇದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net