108 ಅಡಿ ಎತ್ತರದ ಪ್ರತ್ಯಂಗಿರಾದೇವಿ ಪ್ರತಿಮೆ ಆ.20ರಂದು ಲೋಕಾರ್ಪಣೆ

108-foot-tall statue of Pratyangira Devi to be unveiled on August 20.
108-foot-tall statue of Pratyangira Devi to be unveiled on August 20.
Published on
ಚಿಕ್ಕ ಕಳ್ಳಬಾಳು : (ಸಿಂಧ್ಯಾ ನಗರ) ದೇವಾಲಯದ ಆವರಣದಲ್ಲಿ ನಿರ್ಮಿಸಿರುವ 108 ಅಡಿ ಎತ್ತರದ ಪ್ರತ್ಯಂಗಿರಾದೇವಿ ಪ್ರತಿಮೆಯನ್ನು ಆ.20ರಂದು ಲೋಕಾರ್ಪಣೆ ಮಾಡಲಾಗುವುದು ಎಂದು ದೇವಾಲಯದ ಧರ್ಮದರ್ಶಿ ಹಾಗೂ ಸಂಸ್ಥಾಪಕ ಸಿ.ಪಿ.ಕೃಷ್ಣೇಗೌಡ ತಿಳಿಸಿದರು.
ದೇವಾಲಯದ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪೂರ್ವಜರು ತಲೆತಲಾಂತರಗಳಿಂದ ಶ್ರೀ ಉಗ್ರಮುನೇಶ್ವರ ಸ್ವಾಮಿಯನ್ನು ಪೂಜಿಸಿಕೊಂಡು ಬರುತ್ತಿದ್ದು, ದಾನಿಗಳ ಸಹಕಾರದಿಂದ 108 ಅಡಿ ಎತ್ತರದ ಪ್ರತಿಮೆ ನಿರ್ಮಿಸಲಾಗಿದೆ. ಪ್ರತ್ಯಂಗಿರಾದೇವಿ ದರ್ಶನ ಮಾಡಲು ಕೇರಳ ಮತ್ತು ತಮಿಳುನಾಡು ಪ್ರದೇಶಗಳಿಗೆ ಜನ ಹೋಗುತ್ತಿದ್ದರು. ಹೀಗಾಗಿ ಇಲ್ಲಿಯೇ ದೇವಿಯ ದರ್ಶನ ಪಡೆಯಲು ಅನುಕೂಲ ಮಾಡಲಾಗುತ್ತಿದೆ ಎಂದರು.
ಶಿವಮೊಗ್ಗದ ಪ್ರತಿಮೆ ಶಿಲ್ಪಿ ಜೀವನ್ ಮಾತನಾಡಿ, ಪ್ರಥಮ ಬಾರಿಗೆ ವಿಗ್ರಹವನ್ನು ಇಟ್ಟಿಗೆ ಚೂರು ಬಳಸದೆ ಕೇವಲ ಕಾಂಕ್ರಿಟ್ ಬಳಸಿ ನಿರ್ಮಿಸಲಾಗಿದೆ.
ಇಲ್ಲಿನ ಹವಾಮಾನ ಮತ್ತು ಗಾಳಿಯ ವೇಗ ಗಮನದಲ್ಲಿಟ್ಟುಕೊಂಡು ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಪ್ರಕೃತಿ ವೈಪರಿತ್ಯಗಳು ಬಂದರೂ ಅದನ್ನು ತಡೆದುಕೊಳ್ಳುವ ಶಕ್ತಿಯು ಪ್ರತಿಮೆಗಿದೆ ಎಂದರು. ರಾಜ್ಯದಲ್ಲಿ ಅತಿ ಎತ್ತರದ ಪ್ರತ್ಯಂಗಿರಾ ದೇವಿ ವಿಗ್ರಹ ಇದಾಗಿದೆ. ಪ್ರತಿ ಆರು ಇಂಚಿಗೆ ಒಂದರಂತೆ ಪ್ರತಿಮೆಯ ರಚನೆಗೆ ಸುಮಾರು 500 ಚಿತ್ರಗಳನ್ನು ರಚಿಸಿ ವಿಗ್ರಹ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಪ್ರತಿಮೆ ವಿನ್ಯಾಸಕಾರ ಹಾಸನ್ ಕುಮಾರ್ ಮಾತನಾಡಿ, ಮಂತ್ರಾಲಯದಲ್ಲಿ ಪಂಚಮುಖಿ, ರಾಜಾಜಿನಗರದಲ್ಲಿ ಶ್ರೀರಾಮ ಸೇರಿ ಸುಮಾರು ಒಂಬತ್ತು ಕಡೆಗಳಲ್ಲಿ ವಿಗ್ರಹಗಳ ಕೆತ್ತನೆ ಮಾಡಲಾಗುತ್ತಿದ್ದು, ಎಲ್ಲ ರೀತಿಯಲ್ಲಿಯೂ ತಂತ್ರಜ್ಞಾನ ಬಳಕೆ ಮಾಡಲಾಗಿದೆ. ನೂರಾರು ವರ್ಷಗಳಾದರೂ ಪ್ರತಿಮೆಗೆ ಚ್ಯುತಿ ಆಗದಂತೆ ನಿರ್ಮಿಸಲಾಗುತ್ತಿದೆ ಎಂದರು.
ದೇವಾಲಯ ಸಮಿತಿ ಸದಸ್ಯರಾದ ಸಚಿನ್, ಮುತ್ತುರಾಜ್ ಗೌಡ, ದೇವರಾಜು, ಸುರೇಶ್, ಜಯರಾಮೇಗೌಡ, ರಾಜೇಂದ್ರ ಪ್ರಸಾದ್, ಬಸವರಾಜ್, ನಂದನ್‌ಗೌಡ, ಶೈಲೇಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net