ಅಭಿಮಾನೋತ್ಸವಕ್ಕೆ 10 ಸಾವಿರ ಮಂದಿ ಭಾಗಿ

10,000 people participated in the celebration
10,000 people participated in the celebration
Published on
ತುರುವೇಕೆರೆ : ಇದೇ ತಿಂಗಳ 9ರಂದು ಚಿತ್ರದುರ್ಗದಲ್ಲಿ ಬಿಎಸ್​ವೈ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಆಯೋಜಿಸಿರುವ ಬಿಎಸ್​ವೈ ಅಭಿಮಾನೋತ್ಸವ ಕಾರ್ಯಕ್ರಮಕ್ಕೆ ತುರುವೇಕೆರೆ ಕ್ಷೇತ್ರದಿಂದ 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಲಿದ್ದಾರೆ ಎಂದು ಮಾಜಿ ಶಾಸಕ ಮಸಾಲ ಜಯರಾಮ್​ ತಿಳಿಸಿದರು.
ಪಟ್ಟಣದ ಸಮೀಪದ ತಮ್ಮ ಪಾಮ್​ರ್ ಹೌಸ್​ನಲ್ಲಿ ಬಿಎಸ್​ವೈ ಅಭಿಮಾನೋತ್ಸವ ಕಾರ್ಯಕ್ರಮದ ಪೂರ್ವಭಾವಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ದಕ್ಷಿಣ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದಿರುವ ಕೀರ್ತಿ ಬಿಎಸ್​ವೈಗೆ ಸಲ್ಲುತ್ತದೆ. ಕೇವಲ 2 ಸ್ಥಾನಗಳಿಂದ ಸ್ವಂತ ಬಲದಲ್ಲಿ ಬಿಜೆಪಿ ರಾಜ್ಯದಲ್ಲಿ ಅಧಿಕಾರ ನಡೆಸುವ ಹಂತಕ್ಕೆ ಬಂದಿರುವುದು ಬಿಎಸ್​ವೈ ಶ್ರಮದಿಂದ. ಸೈಕಲ್​ನಲ್ಲಿ ರಾಜ್ಯವನ್ನು ಸುತ್ತಿ ಪಕ್ಷ ಸಂಘಟನೆ ಮಾಡಿದ್ದಾರೆ. ಸಾವಿರಾರು ರೈತರ ಪರ ಹೋರಾಟಗಳನ್ನು ಮಾಡಿ ರೈತ ನಾಯಕನಾಗಿ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಜನಪರವಾದ ಯೋಜನೆ ನೀಡಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ತಾಲೂಕಿನ ಅಭಿವೃದ್ದಿ ಕಾಮಗಾರಿಗೆ ಸಾವಿರಾರು ಕೋಟಿ ಅನುಧಾನ ನೀಡಿದ್ದಾರೆ. ಬಿಎಸ್​ವೈ ಅಭಿಮಾನೋತ್ಸವ ಆಚರಿಸುತ್ತಿರುವುದು ಸಂತೋಷದ ವಿಷಯ. ಈ ಕಾರ್ಯಕ್ರಮಕ್ಕೆ ನಮ್ಮ ಕ್ಷೇತ್ರದಿಂದ ಸುಮಾರು ಹತ್ತು ಸಾವಿರಕ್ಕೂ ಹೆಚ್ಚಿನ ಕಾರ್ಯಕರ್ತರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಹಿರಿಯ ಮುಖಂಡ ಅರಳಿಕೆರೆ ಶಿವಯ್ಯ, ಹಾಲೇಗೌಡ, ತೀರ್ಥಕುಮಾರ್​, ಜಗದೀಶ್​, ಪದ್ಮಾವತಿ, ರಾಧಾ, ಅನಿತಾ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net