ಭರದಿಂದ ಸಿದ್ಧಗೊಳ್ಳುತ್ತಿವೆ 10 ಲಕ್ಷ ಲಾಡು / NELAMANGAL

ನೆಲಮಂಗಲ ಕುಣಿಗಲ್​ ವೃತ್ತದ ಬಳಿ ಕಾಂಗ್ರೆಸ್​ ಕಾರ್ಯಾಲಯದ ಆವರಣದಲ್ಲಿ ಡಿ.ಕೆ.ಶಿವಕುಮಾರ್​ ಮುಖ್ಯಮಂತ್ರಿಯಾಗುತ್ತಿರುವ ಹಿನ್ನೆಲೆ ಕ್ಷೇತ್ರದ ಪ್ರತಿ ಮನೆಗೆ ವಿತರಣೆ ಮಾಡಲು ತಯಾರಿಸುತ್ತಿರುವ ಲಾಡುವನ್ನು ಶಾಸಕ  ಎನ್​.ಶ್ರೀನಿವಾಸ್​ ಪರಿಶೀಲಿಸಿದರು.
ನೆಲಮಂಗಲ ಕುಣಿಗಲ್​ ವೃತ್ತದ ಬಳಿ ಕಾಂಗ್ರೆಸ್​ ಕಾರ್ಯಾಲಯದ ಆವರಣದಲ್ಲಿ ಡಿ.ಕೆ.ಶಿವಕುಮಾರ್​ ಮುಖ್ಯಮಂತ್ರಿಯಾಗುತ್ತಿರುವ ಹಿನ್ನೆಲೆ ಕ್ಷೇತ್ರದ ಪ್ರತಿ ಮನೆಗೆ ವಿತರಣೆ ಮಾಡಲು ತಯಾರಿಸುತ್ತಿರುವ ಲಾಡುವನ್ನು ಶಾಸಕ ಎನ್​.ಶ್ರೀನಿವಾಸ್​ ಪರಿಶೀಲಿಸಿದರು.
Published on
ನೆಲಮಂಗಲ : ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್​ ಬುಧವಾರ ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ವಿಧಾನಸಭಾ ೇತ್ರದ ಪ್ರತಿ ಮನೆ ಮನೆಗೆ ಲಾಡು ವಿತರಣೆ ಮಾಡಲು ಸಿದ್ಧತೆ ನಡೆದಿದೆ.
ಮಂಗಳವಾರ ಬೆಳಗಿನಿಂದಲೇ ನಗರದ ಕುಣಿಗಲ್​ ವೃತ್ತದ ಬಳಿ ಇರುವ ಕಾಂಗ್ರೆಸ್​ ಕಾರ್ಯಾಲಯದ ಆವರಣದಲ್ಲಿ ಲಾಡು ತಯಾರಿ ನಡೆದಿದೆ. ವಿಧಾನಸಭಾ ೇತ್ರ ವ್ಯಾಪ್ತಿಯ 90 ಸಾವಿರಕ್ಕೂ ಅಧಿಕ ಮನೆಗಳಿಗೆ 9 ರಿಂದ 10 ಲಕ್ಷ ಲಾಡು ತಯಾರಿಸಲಾಗುತ್ತಿದ್ದು, ಮಂಗಳವಾರ ಲಾಂತರ ಲಾಡು ಸಿದ್ಧವಾಗಿವೆ. 250ಕ್ಕೂ ಹೆಚ್ಚು ಮಂದಿ ಬಾಣಸಿಗರು ಮುಂದಿನ ಶುಕ್ರವಾರದವರೆಗೂ ಲಾಡು ತಯಾರಿ ಮಾಡಲಿದ್ದು, ನೂರಕ್ಕೂ ಹೆಚ್ಚು ಮಂದಿ ಯುವಕರು ಲಾಡು ಪ್ಯಾಕಿಂಗ್​ನಲ್ಲಿ ತೊಡಗಿದ್ದಾರೆ.
ಶಾಸಕರಿಂದ ಪರಿಶೀಲನೆ: ಲಾಡು ತಯಾರಿಸುತ್ತಿರುವ ಸ್ಥಳಕ್ಕೆ ಶಾಸಕ ಎನ್​.ಶ್ರೀನಿವಾಸ್​ ಭೇಟಿ ನೀಡಿ ಶುಚಿತ್ವದ ಜತೆಗೆ ಲಾಡುಗಳ ಗುಣಮಟ್ಟ ಪರಿಶೀಲಿಸಿದರು. ೇತ್ರದ ಜನರನ್ನು ಈ ಸಂಭ್ರಮಾಚರಣೆಯಲ್ಲಿ ಭಾಗಿಗಳನ್ನಾಗಿಸುವ ಉದ್ದೇಶದಿಂದ ನೇರಪ್ರಸಾರ, ಸಂಭ್ರಮಾಚರಣೆ ಜತೆಗೆ ೇತ್ರದ ಪ್ರತಿ ಮನೆಗಳಿಗೆ ಪಾತೀತವಾಗಿ ಲಾಡು ವಿತರಣೆ ಮಾಡುವ ನಿಟ್ಟಿನಲ್ಲಿ ತಯಾರಿ ಮಾಡಲಾಗುತ್ತಿದೆ. ಬುಧವಾರದಿಂದಲೇ ಲಾಡು ವಿತರಣೆ ಮಾಡಲು ಪಕ್ಷದ ಮುಖಂಡರು, ಕಾರ್ಯಕರ್ತರು ಸಿದ್ಧರಾಗಿದ್ದಾರೆ ಎಂದು ಶ್ರೀನಿವಾಸ್​ ತಿಳಿಸಿದರು.
ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಮಂಜುನಾಥ್​, ಉಪಾಧ್ಯಕ್ಷ ಸಿ.ಎಂ.ಗೌಡ, ತಾಪಂಮಾಜಿ ಸದಸ್ಯ ಮುನಿಯಪ್ಪ, ಉದ್ಯಮಿ ಚಿಕ್ಕಹನುಮೇಗೌಡ, ಮುಖಂಡ ಚಿಕ್ಕಣ್ಣ, ಗಂಗಾಧರ್​, ರಾಜಣ್ಣ, ನಾರಾಯಣ್​ರಾವ್​, ವೇಣು ಮತ್ತಿತರರು ಉಪಸ್ಥಿತರಿದ್ದರು.
ನೇರಪ್ರಸಾರ ವ್ಯವಸ್ಥೆ : ಬುಧವಾರ ಸಂಜೆ ಡಿ.ಕೆ.ಶಿವಕುಮಾರ್​ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದು, ನಗರಸಭೆ ಸೇರಿ ಸೋಲೂರು, ಸೋಂಪುರ, ತ್ಯಾಮಗೊಂಡ್ಲು, ಕಸಬಾ, ಹೋಬಳಿ ಕೇಂದ್ರ ವ್ಯಾಪ್ತಿಯಲ್ಲಿ ಪ್ರೊಜೆಕ್ಟರ್​ ಅಳವಡಿಕೆ ಮಾಡಲಾಗುವುದು. ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಎಲ್ಲ ಹೋಬಳಿ ಕೇಂದ್ರಗಳಲ್ಲಿ ಕನಿಷ್ಠ 3 ಸಾವಿರ ಕಾಂಗ್ರೇಸ್​ ಮುಖಂಡರು, ಕಾರ್ಯಕರ್ತರು ಸೇರಿ ಸಾರ್ವಜನಿಕರು ಭಾಗವಹಿಸುವ ನಿರೀೆ ಇದೆ.
ಸಂಭ್ರಮಾಚರಣೆ : ಡಿ.ಕೆ.ಶಿವಕುಮಾರ್​ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ವೀಕ್ಷಣೆ ಬಳಿಕ ಮುಖಂಡರು ಕಾರ್ಯಕರ್ತರು, ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸುವರು ಎಂದು ಕಸಬಾ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಮಂಜುನಾಥ್​ ತಿಳಿಸಿದರು.
ದಾಖಲೆ ಪ್ರಮಾಣ : ರಾಮನಗರ ಶಾಸಕ ಇಕ್ಬಾಲ್​ ಹುಸೇನ್​ ಪ್ರತಿ ವರ್ಷ 4 ಲಕ್ಷ ಲಾಡು ತಯಾರಿಸಿ ವಿತರಣೆ ಮಾಡುವ ವಿಚಾರ ಕೇಳಿದ್ದೆವು. ಆದರೆ ೇತ್ರದ ಶಾಸಕ ಎನ್​. ಶ್ರೀನಿವಾಸ್​ ಅವರು 10 ಲಕ್ಷ ಲಾಡು ತಯಾರಿ ಮಾಡುತ್ತಿರುವುದು ಹೆಮ್ಮೆಯ ವಿಚಾರ. ಹಿಂದಿನ ಯಾವುದೇ ಶಾಸಕರು ಮಾಡದ ಕೆಲಸ ಮಾಡಿರುವ ಶಾಸಕರು ಲಾಡು ವಿತರಣೆಯಲ್ಲೂ ದಾಖಲೆ ಮಾಡಿದ್ದಾರೆ ಎಂದು ನೆ.ಯೋ.ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ನಾಗರಾಜು ಪ್ರಶಂಸಿಸಿದರು. ರಾಜ್ಯದ ಯಾವುದೇ ವಿಧಾನಸಭಾ ೇತ್ರದಲ್ಲೂ ಈ ರೀತಿಯ ಸಂಭ್ರಮ ಮಾಡಲಾಗಿಲ್ಲ. ನಮ್ಮ ೇತ್ರದಲ್ಲಿ ಶಾಸಕರ ನೇತೃತ್ವದಲ್ಲಿ ಮಾಡುತ್ತಿರುವುದುಪಕ್ಷದ ಮುಖಂಡರು, ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದೆ ಎಂದು ನೆ.ಯೋ.ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ನಾರಾಯಣಗೌಡ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net