ಎನ್ಆರ್ಇಜಿ ಆ್ಯಕ್ಷನ್ ಪ್ಲಾನ್ಗೆ 10 ದಿನಗಳ ಡೆಡ್ಲೈನ್ meeting
ಮಧುಗಿರಿಯ meeting ಜಿಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಎನ್ಆರ್ಇಜಿ ಅಧಿಕಾರಿಗಳ ಸಭೆಯಲ್ಲಿ ಮುಖ್ಯಾಧಿಕಾರಿ ಸುರೇಶ್, ಜಿಪಂ ಉಪ ಕಾರ್ಯದರ್ಶಿ ಸಂಜೀವಪ್ಪ, ಜಿಪಂ ಕಾರ್ಯ ಪಾಲಕ ಇಂಜಿನಿಯರ್ ಹನುಮಂತಪ್ಪ, ಸಹಾಯಕ ಕಾರ್ಯ ಪಾಲಕ ಅಭಿಯಂತರ ಮಂಜುನಾಥ್, ತಾಪಂ ಇಒ ಉತ್ತಮ್ ಇದ್ದರು.
ಎನ್ಆರ್ಇಜಿ ಕಾಮಗಾರಿಗಳಿಗೆ 10 ದಿನಗಳ ಒಳಗೆ ಆಕ್ಷನ್ ಪ್ಲಾನ್ ಮಾಡಬೇಕು
meeting
ಎಂಬ ಡೆಡ್ ಲೈನ್ ಇದ್ದು, ಮೊದಲು ಮಂಜೂರಾತಿ ಮಾಡಿಕೊಳ್ಳಿ ಎಂದು ಮಾಜಿ ಸಚಿವ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.
ಪಟ್ಟಣದ ಜಿಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಎನ್ಆರ್ಇಜಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಹೆಚ್ಚು ಆಕ್ಷನ್ ಪ್ಲಾನ್ ಮಾಡಿಕೊಂಡರೆ ಕೆಲಸ ಮಾಡಲು ಅನುಕೂಲವಾಗಲಿದೆ. ಈ ಹಿಂದೆ ಮಧುಗಿರಿ ಎನ್ಆರ್ಇಜಿಯಲ್ಲಿ ಪ್ರಥಮ ಸ್ಥಾನದಲ್ಲಿತ್ತು. ಇದು ಮತ್ತೆ ಮರುಕಳಿಸಬೇಕು. ಎಲ್ಲ ಪಿಡಿಒಗಳು, ಆಡಳಿತಾಧಿಕಾರಿಗಳು ಇದರ ಬಗ್ಗೆ ಗಮನಹರಿಸಬೇಕು. ಮುಂದಿನ ಶುಕ್ರವಾರದ ಒಳಗೆ ಎಲ್ಲರೂ ಆಕ್ಷನ್ ಪ್ಲಾನ್ ನೀಡಿರಬೇಕು. ಅಂದು ಮಧ್ಯಾಹ್ನ 3 ಗಂಟೆಗೆ ಸಭೆ ನಡೆಸಲಿದ್ದು, ಏನೇ ಸಮಸ್ಯೆಗಳಿದ್ದರೂ ಗಮನಕ್ಕೆ ತಂದಲ್ಲಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸೂಚನೆ ನೀಡಿದರು.
2013&-14ರಲ್ಲಿ ಎನ್ಆರ್ಇಜಿಯಲ್ಲಿ ತಾಲೂಕು ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿತ್ತು. ಅದೇ ಪರಿಸ್ಥಿತಿ ಮತ್ತೆ ನಿಮಾರ್ಣವಾಗಬೇಕು. ಪ್ರತಿ ವರ್ಷ ನಮ್ಮ ತಾಲೂಕು ಪ್ರಥಮ ಸ್ಥಾನದಲ್ಲಿರಬೇಕು. ಆ ರೀತಿ ಕೆಲಸ ನಿರ್ವಹಿಸಿ ಎಂದರು.
ಎಲ್ಲೆಲ್ಲಿ ಮೀನುಗಾರಿಕೆ ಕೈಗೊಳ್ಳಲು ಅನುಕೂಲಗಳಿವೆಯೋ ಅಲ್ಲೆಲ್ಲ ಮೀನುಗಾರಿಕೆ ಮಾಡಲು ಅವಕಾಶ ಮಾಡಿಕೊಡಿ ಎಂದು ಶಾಸಕರು ಮೀನುಗಾರಿಕೆ ಇಲಾಖೆಯ ದಾದಾಪೀರ್ಗೆ ಸೂಚನೆ ನೀಡಿದಾಗ, ಡಿಮ್ಯಾಂಡ್ ಇಲ್ಲ ಎಂದು ಮೀನುಗಾರಿಕೆ ಇಲಾಖೆಯ ಅಧಿಕಾರಿ ದಾದಾಪೀರ್ ತಿಳಿಸಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಹಾಗಾದರೆ ನೀವು ಏಕೆ ಬೇಕು, ನಿಮ್ಮ ಇಲಾಖೆ ಏಕೆ ಬೇಕು. ಸುಮ್ಮನೆ ಸಂಬಳ ತೆಗೆದುಕೊಂಡು ಹೋಗುವುದಲ್ಲ. ಹೊಸ ಹೊಸ ಕೆಲಸಗಳನ್ನು ಸೃಷ್ಟಿಸಿ ಕೆಲಸ ಮಾಡಿ ಎಂದು ಸೂಚನೆ ನೀಡಿದರು.
ಎಡಿ ಧನಂಜಯ್, ತೋಟಗಾರಿಕೆ ಇಲಾಖೆಯ ಶಶಿಧರ್, ವಲಯ ಅರಣ್ಯಾಧಿಕಾರಿ ಸುರೇಶ್, ಸಾಮಾಜಿಕ ಅರಣ್ಯ ಇಲಾಖೆಯ ಶೈಲಜಾ, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್ ಸಿಡಿಪಿಒ ಕುಮಾರ್ ನಾಯ್ಕ, ಮೀನುಗಾರಿಕೆ ಇಲಾಖೆಯ ದಾದಾಪೀರ್, ಎಂ.ಐ ಇಲಾಖೆಯ ಮಂಜು ಕಿರಣ್, ಕೃಷಿ ಇಲಾಖೆ ಉಪ ನಿರ್ದೇಶಕ ಇಂದ್ರ ಕುಮಾರ್, ಬಿಇಒ ಹನುಮಂತರಾಯಪ್ಪ ಇತರರಿದ್ದರು.