ಬಾಗಲೂರಿನಲ್ಲಿ ಕನ್ನಡ ರಾಜ್ಯೋತ್ಸವದ ನಿಮಿತ್ತ ಕನ್ನಡ ಸ್ಪರ್ಧೆ

ಬಾಗಲೂರಿನಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸರೋಜ ಸಂಸ್ಕಾರ ಕೇಂದ್ರ ಆಯೋಜಿಸಿದ್ದ ‘ಶುದ್ಧ ಕನ್ನಡ ಸ್ಪರ್ಧೆ’ಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು.
ಬಾಗಲೂರಿನಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸರೋಜ ಸಂಸ್ಕಾರ ಕೇಂದ್ರ ಆಯೋಜಿಸಿದ್ದ ‘ಶುದ್ಧ ಕನ್ನಡ ಸ್ಪರ್ಧೆ’ಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು.
Published on

ಪ್ರಮುಖ ಮುಖ್ಯಾಂಶಗಳು

  • ಬಾಗಲೂರಿನಲ್ಲಿ ವಿದ್ಯಾರ್ಥಿಗಳಿಗೆ ಶುದ್ಧ ಕನ್ನಡ ಸ್ಪರ್ಧೆ
  • ಸರೋಜಾ ಸಂಸ್ಕಾರ ಕೇಂದ್ರ ಆಯೋಜನೆ
  • ಕನ್ನಡ ರಾಜ್ಯೋತ್ಸವದ ಹಿನ್ನೆಲೆ

ಬೆಂಗಳೂರು:ಬಾಗಲೂರಿನ ಸರೋಜಾಸಂಸ್ಕಾರ ಕೇಂದ್ರ ಮತ್ತು ಮತ್ತೂರುಶ್ರೀ ಸಂಸ್ಥೆಯಿಂದ 5ನೇತರಗತಿಯಿಂದ 10ನೇತರಗತಿ ವಿದ್ಯಾರ್ಥಿಗಳಿಗಾಗಿಶುದ್ಧ ಕನ್ನಡ ಸ್ಪರ್ಧೆಯನ್ನುಏರ್ಪಡಿಸಿತ್ತು.

ಭಾನುವಾರುಬಾಗಲೂರಿನ ಗುಂಡಪ್ಪ ಸರ್ಕಲ್‌ನಲ್ಲಿನಡೆದ ಸ್ಪರ್ಧೆಯಲ್ಲಿ 15ಶಾಲೆಗಳ ಸುಮಾರುನೂರು ವಿದ್ಯಾರ್ಥಿಗಳು ಭಾಗವಹಿಸಿದ್ದರು.ಸ್ಪರ್ಧೆಯಲ್ಲಿಗೆದ್ದ ವಿದ್ಯಾರ್ಥಿಗಳಿಗೆ ಒಟ್ಟು10 ಸಾವಿರರೂಪಾಯಿ ಬಹುಮಾನವನ್ನು ವಿತರಣೆಮಾಡಲಾಯಿತು.

ಕನ್ನಡವರ್ಣಮಾಲೆ ಮತ್ತು ಗುಣಿತಾಕ್ಷರಗಳನ್ನುಉಪಯೋಗಿಸಿ ನೂರು ಶಬ್ದಗಳನ್ನುಉಕ್ತಲೇಖನವನ್ನು ಬರೆಯಲು ಹೇಳಲಾಯಿತು.ಕಾರ್ಯಕ್ರಮದಸಂಯೋಜಕರಾಗಿ ಮತ್ತೂರು ಶ್ರೀನಿವಾಸಮೂರ್ತಿ,ಕಾರ್ಯಕ್ರಮದನಿರ್ದೇಶಕರಾಗಿ ನ್ಯಾಷನಲ್ ಸ್ಕೂಲ್ನವಿ. ರಾಜುಭಾಗವಹಿಸಿದ್ದರು.

ಕಾರ್ಯಕ್ರಮದಯಶಸ್ಸಿಗೆ ಅಚ್ಯುತ ಆಯುರ್ವೇದಿಕ್ಕಾಲೇಜಿನ ಪ್ರಾಂಶುಪಾಲರು ಮತ್ತುಆಡಳಿತ ಮಂಡಳಿಯವರು ಶ್ರಮಿಸಿದರು.ಇದೇ ವೇಳೆ ಪಾಲಕರಿಗೆಮತ್ತು ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ತಪಾಸಣೆಯನ್ನು ಮಾಡಲಾಯಿತು.

ಕಾರ್ಯಕ್ರಮದಪ್ರಾಯೋಜಕರಾಗಿ ಶ್ರೀನಿಧಿ ಸ್ಟೀಲ್ಟ್ರೇಡರ್ಸ್,ಎಸ್‌ಎಂ ಕ್ರಿಯಾಟ್ರಸ್ಟ್, .ಟಿ.ವೈ.ಟ್ರಸ್ಟ್ಮಾರೇನಹಳ್ಳಿ,ವಿ.ಜೆಇಂಟರ್‌ನ್ಯಾಷನಲ್ ಸ್ಕೂಲ್ ಸಹಕಾರನೀಡಿದ್ದರು.ಪ್ರಥಮ ದ್ವಿತೀಯಮತ್ತು ತೃತೀಯ ಬಹುಮಾನಗಳು ಕ್ರಮವಾಗಿಮೂರು ಸಾವಿರ,ಎರಡು ಸಾವಿರಮತ್ತು ಒಂದು ಸಾವಿರ ರೂಪಾಯಿ ನಗದುವಿತರಿಸಲಾಯಿತು.200 ರೂ.ಸಮಾಧಾನಕರಬಹುಮಾನವನ್ನು 10ಜನ ವಿದ್ಯಾರ್ಥಿಗಳಿಗೆನೀಡಿ ಪ್ರೋತ್ಸಾಹಿಸಲಾಯಿತು.

ಸರೋಜಾಸಂಸ್ಕಾರ ಕೇಂದ್ರದ ಅಧ್ಯಾಪಕರಾದಎಂ.ಎಸ್ಉಪಮನ್ಯು,ಶ್ರೀವಿದ್ಯಾಕೆ.ವಿ.ಗ್ರಾ.ಪಂ.ಅಧ್ಯಕ್ಷ ಕೆಂಪೇಗೌಡಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net