ಬೆಂಬಲ ಬೆಲೆಯಲ್ಲಿ ಖರೀದಿಗೆ ಆಗ್ರಹ

ಬೆಳಗಾವಿ ನಗರದಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್​ ರೋಷನ್​ಗೆ ಜಿಪಂ ಮಾಜಿ ಸದಸ್ಯ ಶಂಕರ ಮಾಡಲಗಿ, ಸಂಗಮೇಶ್ವರ ಪಿಕೆಪಿಎಸ್​ ಅಧ್ಯ ನಿಂಗಪ್ಪ ಚೌಡನ್ನವರ ಮನವಿ ಸಲ್ಲಿಸಿದರು.
ಬೆಳಗಾವಿ ನಗರದಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್​ ರೋಷನ್​ಗೆ ಜಿಪಂ ಮಾಜಿ ಸದಸ್ಯ ಶಂಕರ ಮಾಡಲಗಿ, ಸಂಗಮೇಶ್ವರ ಪಿಕೆಪಿಎಸ್​ ಅಧ್ಯ ನಿಂಗಪ್ಪ ಚೌಡನ್ನವರ ಮನವಿ ಸಲ್ಲಿಸಿದರು.
Published on
ಬೈಲಹೊಂಗಲ: ಬೆಂಬಲ ಬೆಲೆ ಯೋಜನೆಯಡಿ ಹೆಸರುಕಾಳು, ಉದ್ದು ಖರೀದಿಗೆ ಸರ್ಕಾರ ಹಾಗೂ ನೆೆಡ್​ ಸಂಸ್ಥೆ ವಿಧಿಸಿರುವ ತೇವಾಂಶ ಮತ್ತು ಕಾಳಿನ ಗುಣಮಟ್ಟದ ಮಾನದಂಡ ಸಡಿಲಿಸುವಂತೆ ಆಗ್ರಹಿಸಿ ಈಚೆಗೆ ಜಿಪಂ ಮಾಜಿ ಸದಸ್ಯ ಶಂಕರ ಮಾಡಲಗಿ, ದೊಡವಾಡ ಸಂಗಮೇಶ್ವರ ಪಿಕೆಪಿಎಸ್​ ಅಧ್ಯ ನಿಂಗಪ್ಪ ಚೌಡನ್ನವರ ಜಿಲ್ಲಾಧಿಕಾರಿ ಮೊಹಮ್ಮದ್​ ರೋಷನ್​ಗೆ ಮನವಿ ಸಲ್ಲಿಸಿದರು. ದೊಡವಾಡ ಭಾಗದ ಹೆಸರುಕಾಳು, ಉದ್ದು ಖರೀದಿಗೆ ಸರ್ಕಾರ ಹಿಂದೇಟು ಹಾಕಿದ್ದರಿಂದ ರೈತರು ಬೈಲಹೊಂಗಲದಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದರು. ಅತಿಯಾದ ಮಳೆಯಿಂದ ಕಾಳುಗಳು ಗುಣಮಟ್ಟ ಕಳೆದುಕೊಂಡಿದ್ದು, ಮರುಪರಿಶೀಲಿಸಿ ಖರೀದಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಮನವಿ ಮಾಡಿದರು. ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಮೊಹಮ್ಮದ್​ ರೋಷನ್​, ರೈತರಿಗೆ ಸಹಾಯವಾಗುವ ರೀತಿಯಲ್ಲಿ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದು, ಗುಣಮಟ್ಟ ಮರುಪರಿಶೀಲನೆ ಕಾರ್ಯ ನಡೆಯಲಿದೆ. ಸರ್ಕಾರಕ್ಕೂ ಪತ್ರ ಬರೆಯಲಾಗಿದ್ದು, ಇನ್ನೊಮ್ಮೆ ಉನ್ನತಮಟ್ಟದ ಅಧಿಕಾರಿಗಳ ಸಭೆ ಕರೆಯಲಾಗುವುದು ಎಂದರು. ಮುಖಂಡರಾದ ಬಸವರಾಜ ಅಸುಂಡಿ, ಬಸವರಾಜ ಮುರಗೋಡ, ನಾಗಪ್ಪ ಸವದತ್ತಿ, ಮಡಿವಾಳಪ್ಪ ಚಂದರಗಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net