ರಾಜ್ಯ ವ್ಯಾಪಿ ಇ-ಚಲನ್‌ನಲ್ಲಿ ಸಂಚಾರ ದಂಡ ವಿಧಿಸುವ ಸೇವೆ, ಮ್ಯಾನ್ಯೂಯಲ್ ಸೇವೆಗೆ ರದ್ದು; ಎಡಿಜಿಪಿ ಅಲೋಕ್‌ಕುಮಾರ್ ಹೇಳಿಕೆ

ADGP Alok Kumar
Published on

ಬೆಂಗಳೂರು: ದೇಶದಲ್ಲಿಯೇ ಸಂಚಾರ ನಿಯಮ ಉಲ್ಲಂಸುವ ವಾಹನ ಸವಾರರಿಗೆ ಇ-ಚಲನ್‌ನಲ್ಲಿ ದಂಡ ವಿಧಿಸುವಲ್ಲಿ ಕರ್ನಾಟಕವೇ ಮೊದಲ ಸ್ಥಾನದಲ್ಲಿದೆ. ಇಡೀ ದೇಶದಲ್ಲಿ ಇ-ಚಲನ್‌ನಲ್ಲಿ ದಂಡ ವಿಧಿಸುವ ಪ್ರಕರಣಗಳ ಪೈಕಿ ಶೇ.50 ಕೇಸುಗಳು ನಮ್ಮ ರಾಜ್ಯದಲ್ಲಿಯೇ ದಾಖಲಾಗಿವೆ.

ಈ ಕುರಿತು ಟ್ವಿಟರ್‌ನಲ್ಲಿ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್‌ಕುಮಾರ್, ಮಾಹಿತಿ ಹಂಚಿಕೊಂಡಿದ್ದಾರೆ. ಸಂಚಾರ ನಿಯಮ ಉಲ್ಲಂಘನೆಗೆ ಇ-ಚಲನ್‌ನಲ್ಲಿ ವಿಧಿಸುತ್ತಿರುವ ಒಟ್ಟಾರೆ ಪ್ರಕರಣಗಳಲ್ಲಿ ರಾಜ್ಯದಲ್ಲಿ ಅರ್ಧಕ್ಕಿಂತ ಹೆಚ್ಚು ಕೇಸುಗಳು ಸೇರಿವೆ.

ಆದರೂ, ಕೆಲ ಜಿಲ್ಲೆಗಳಲ್ಲಿ ಸಂಚಾರ ನಿಯಮ ಉಲ್ಲಂಸುವರಿಗೆ ಕೈಬರಹದಲ್ಲಿ (ಮ್ಯಾನ್ಯೂಯಲ್) ರಸೀದಿ ಕೊಟ್ಟು ದಂಡ ವಸೂಲಿ ಮಾಡಲಾಗುತ್ತಿದೆ. ಈ ವ್ಯವಸ್ಥೆಯನ್ನು ಸ್ಥಗಿತಗೊಳಿಸಿ ಇ-ಚಲನ್ ಸೇವೆಯನ್ನು ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ ಎಂದು ಅಲೋಕ್ ಕುಮಾರ್ ತಿಳಿಸಿದ್ದಾರೆ.

ಆ.1 ರಿಂದ 9ರ ಒಳಗಿನ ಅಂಕಿಅಂಶಗಳನ್ನು ಗಮನಿಸಿದಾಗ ದೇಶದಲ್ಲಿ 42,071 ಸಂಚಾರ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದು, 2.10 ಕೋಟಿ ರೂ.ದಂಡ ವಿಧಿಸಲಾಗಿದೆ. ಇದರಲ್ಲಿ 325 ಕೇಸ್‌ಗಳಲ್ಲಿ 1.62 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ಕರ್ನಾಟಕದಲ್ಲಿ 24,582 ಕೇಸ್ ದಾಖಲಾಗಿದ್ದು, 1.22 ಕೋಟಿ ರೂ. ದಂಡ ವಿಧಿಸಲಾಗಿದೆ. ಈ ಪೈಕಿ 111 ಪ್ರಕರಣಗಳಲ್ಲಿ 55,500 ದಂಡ ವಸೂಲಿ ಆಗಿದ್ದು, ದೇಶದಲ್ಲಿ ಮೊದಲ ರಾಜ್ಯವಾಗಿದೆ ಎಂದು ಎಡಿಜಿಪಿ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net