ರಾಜ್ಯ ಔಷಧ ಪರಿಷತ್ತಿನ ಆಡಳಿತ ಮಂಡಳಿ ರದ್ದು: ಆದೇಶ | Investigation revealed lapses

Vidhanasoudha
Published on

ಬೆಂಗಳೂರು: ಜವಾಬ್ದಾರಿ ಪರಿಣಾಮಕಾರಿ ನಿರ್ವಹಣೆಯಲ್ಲಿ ವಿಲ, ಅವಧಿ ಮುಗಿದರೂ ಮುಂದುವರಿದಿದ್ದ ರಾಜ್ಯ ಔಷಧ (ಾರ್ಮಸಿ) ಪರಿಷತ್ತಿನ ಆಡಳಿತ ಮಂಡಳಿಯನ್ನು ರದ್ದುಪಡಿಸಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶಿಸಿದೆ.

ಮುಂದಿನ ಚುನಾವಣೆ ನಡೆಯುವವರೆಗೂ ಮಂಡಳಿ ಸುಗಮ ಕಾರ್ಯನಿರ್ವಹಣೆಗಾಗಿ ಆಹಾರ ಸುರಕ್ಷತೆ ಮತ್ತು ಔಷಧ ಆಯುಕ್ತರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಲಾಗಿದೆ ಇಲಾಖೆ ಆದೇಶದಲ್ಲಿ ತಿಳಿಸಿದೆ.

ಅಧಿಕಾರ ದುರ್ಬಬಳಕೆ, ಏಕಪಕ್ಷೀಯ ನಿರ್ಧಾರ, ನೋಂದಣಿ ನವೀಕರಣಕ್ಕೆ ಕಿರುಕುಳದ ಬಗ್ಗೆ ಹಲವಾರು ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್ ಸಂಘಟನೆಗಳು ದೂರು ಸಲ್ಲಿಸಿದ್ದವು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿ ಔಷಧ ನಿಯಂತ್ರಕರಿಗೆ ವರದಿ ಸಲ್ಲಿಸುವ ಜವಾಬ್ದಾರಿ ನೀಡಲಾಗಿತ್ತು.

16 ವರ್ಷಗಳಿಂದ ಚುನಾವಣೆಯಿಲ್ಲ

ಾರ್ಮಸಿ ಪರಿಷತ್ತಿನ ಆಡಳಿತ ಮಂಡಳಿಗೆ 16 ವರ್ಷಗಳಿಂದ ಚುನಾವಣೆ ನಡೆದಿಲ್ಲ. ಇಬ್ಬರು 20 ವರ್ಷಗಳಿಂದ ಸದಸ್ಯರಾಗಿದ್ದರೆ, ನಾಮ ನಿರ್ದೇಶಿತ ಐದು ಸದಸ್ಯರ ಅವಧಿ 2021ರಲ್ಲೇ ಮುಗಿದಿದೆ ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪರಿಷತ್ತಿಗೆ 10 ಾರ್ಮಸಿ ಇನ್ಸ್‌ಪೆಕ್ಟರ್‌ಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲು 15 ಷರತ್ತು ವಿಧಿಸಿ ಆದೇಶ ನೀಡಲಾಗಿತ್ತು. ಆದರೆ ಪರಿಷತ್ತಿನ ಅಧ್ಯಕ್ಷ ಹಾಗೂ ರಿಜಿಸ್ಟ್ರಾರ್ ಷರತ್ತಿನಂತೆ ಔಷಧ ನಿಯಂತ್ರಕರಿಂದ ವೇತನ ನಿಗದಿಪಡಿಸಿಕೊಂಡಿಲ್ಲ.

ಮೀಸಲಾತಿಯನ್ನು ಪಾಲಿಸದೆ ತಮಗೆ ಬೇಕಾದ ರೀತಿಯಲ್ಲಿ ಾರ್ಮಸಿ ಇನ್ಸೆಪೆಕ್ಟರ್‌ಗಳನ್ನು ನೇಮಕ ಮಾಡಿಕೊಂಡಿದ್ದಾರೆ. ಪರಿಷತ್ತಿನ ಪ್ರಸ್ತುತ ರಿಜಿಸ್ಟ್ರಾರ್ ಡಾ.ಕ್ರಾಂತಿ ಕುಮಾರ್ ಸಿರ್ಸೆ ಅವರು ಸರ್ಕಾರದ ಅನುಮತಿ ಪಡೆಯದೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತನಿಖಾ ವರದಿ ಬಹಿರಂಗಪಡಿಸಿದೆ.

ಅನುಮಾನಾಸ್ಪದ ಚಟುವಟಿಕೆ

ನೋಂದಣಿ ನವೀಕರಿಸುವಾಗ ಾರ್ಮಾಸಿಸ್ಟ್‌ಗಳಿಗೆ ಹಿಂಸೆ, ಪರಿಷತ್ತಿನ ಹಣ ಮೂಚ್ಯುವಲ್ ಂಡ್ ನಲ್ಲಿ ಕಾನೂನುಬಾಹಿರವಾಗಿ ಹೂಡಿಕೆ, ಅಧಿಕಾರ ದುರ್ಬಳಕೆಯಾಗಿದೆ. ಅಲ್ಲದೆ, ಔಷಧ ತಜ್ಞರ ಪಟ್ಟಿ ತಯಾರಿಕೆ, ನಿರ್ವಹಣೆ ಮತ್ತು ನೋಂದಣಿಯಾಗದ ವ್ಯಕ್ತಿಗಳು ಔಷಧ ಸರಬರಾಜು ನಿರ್ವಹಣೆ ಹೊಣೆಗಾರಿಕೆಯಲ್ಲೂ ವಿಲವಾಗಿದೆ.

ಒಟ್ಟಾರೆ ಪರಿಷತ್ತಿನ ಕಾರ್ಯಚಟುವಟಿಕೆಗಳು ಸಾರ್ವಜನಿಕರಲ್ಲಿ ಅನುಮಾನಾಸ್ಪದ ಭಾವನೆ ಮೂಡಿಸಿದ್ದು, ಪರಿಷತ್ತಿನ ಸೇವೆಗಳ ಬಗ್ಗೆ ಸಾಕಷ್ಟು ಅಸಮಾಧಾನವಿದೆ. ಪರಿಷತ್ತಿನ ಆಡಳಿತ ಮಂಡಳಿಗೆ 2016ರ ಅಕ್ಟೋಬರ್ 10, 2017ರ ಮೇ 23, ಜೂನ್ 19 ಹಾಗೂ 2022ರ ಸೆಪ್ಟೆಂಬರ್ 9ರಂದು ಚುನಾವಣೆ ಪ್ರಕ್ರಿಯೆ ಅಧಿಕಾರಿಗಳನ್ನು ನೇಮಿಸಲಾಗಿದೆ.

ಆದರೆ ಈ ಅಧಿಕಾರಿಗಳಿಗೆ ಸಮರ್ಪಕವಾದ ಮಾಹಿತಿ ನೀಡಿಲ್ಲ. ಹೊಸದಾಗಿ ಚುನಾವಣೆ ನಡೆಸಲು ಈಗಿನ ಆಡಳಿತ ಮಂಡಳಿ ಅವಕಾಶ ನೀಡಿಲ್ಲವೆಂಬ ಮಹತ್ವದ ಅಂಶವು ತನಿಖಾ ವರದಿಯಲ್ಲಿದೆ. ಈ ವರದಿ ಆಧರಿಸಿ ಆಡಳಿತ ಮಂಡಳಿ ರದ್ದುಪಡಿಸಲಾಗಿದೆ.

ಹೊಸದಾಗಿ ಚುನಾವಣೆ ತನಕ ಆಡಳಿತಾಧಿಕಾರಿ ನೇಮಕ ಸೂಕ್ತವೆಂದು ಆಹಾರ ಸುರಕ್ಷತೆ ಮತ್ತು ಔಷಧ ಆಯುಕ್ತರು ಸಲ್ಲಿಸಿದ ವರದಿ ಪ್ರಕಾರ ಆರೋಗ್ಯ ಇಲಾಖೆ ಈ ಕ್ರಮಕೈಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net