ಜೋಸ್ನಗೆ ಅಬಾಕಸ್​ನಲ್ಲಿ ಪ್ರಥಮ ಬಹುಮಾನ

23-RNR-06
Published on

ರಾಣೆಬೆನ್ನೂರ: ಕೊಪ್ಪಳದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 6ನೇ ರಾಜ್ಯಮಟ್ಟದ ಅಬಾಕಸ್​ ಮತ್ತು ಮಾನಸಿಕ ಅಂಕಗಣಿತ ಸ್ಪರ್ಧೆಯಲ್ಲಿ ನಗರದ ಬಿಎಜೆಎಸ್​ಎಸ್​ ಕ್ಯಾಂಪಸ್​ನ ಜೀನಿಯಸ್​ ಅಬಾಕಸ್​ ಮತ್ತು ವೇದಿಕ ಮ್ಯಾಥ್ಸ ಅಕಾಡೆಮಿಯ ವಿದ್ಯಾಥಿರ್ನಿ ಜೋಸ್ನ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.
ಅವರಿಗೆ ಸಂಸ್ಥೆಯ ಆಡಳಿತಾಧಿಕಾರಿ ಡಾ. ಆರ್​.ಎಂ. ಕುಬೇರಪ್ಪ ಪ್ರಮಾಣಪತ್ರ ವಿತರಿಸಿದರು. ಅಕಾಡೆಮಿಯ ಮುಖ್ಯಸ್ಥ ವಿನಯ ಕುಮಾರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net