ರಾಜ್ಯ ಹೆದ್ದಾರಿಯ ಕೆಸರಿನಲ್ಲಿ ಸಿಲುಕಿದ ಕಾರು; ಪರದಾಡಿದ ಕುಟುಂಬ

26-RNR-07
Published on

ರಾಣೆಬೆನ್ನೂರ: ನಗರದ ಹೊರವಲಯದ ಜಾನುವಾರು ಮಾರುಕಟ್ಟೆ ಬಳಿ ಬಿಳಿಗಿರಿರಂಗನದಿಟ್ಟು ರಾಜ್ಯ ಹೆದ್ದಾರಿಯ ಕೆಸರಿನಲ್ಲಿ ಕಾರೊಂದು ಸಿಲುಕಿ ದಂಪತಿ ಪರದಾಡಿದ ಟನೆ ಸೋಮವಾರ ಬೆಳಗಿನ ಜಾವ ನಡೆದಿದೆ. ನಂತರ ಸ್ಥಳಿಯರ ಹಾಗೂ ಪೊಲೀಸರ ಸಹಾಯದಿಂದ ಕಾರನ್ನು ಹೊರತೆಗೆಯಲಾಗಿದೆ.

ಬೆಂಗಳೂರಿನ ಉಪನ್ಯಾಸಕ ಜ್ಞಾನೇಶ ಎಂಬುವರು ತಮ್ಮ ಕುಟುಂಬದೊಂದಿಗೆ ತಾಲೂಕಿನ ದೇವರಗುಡ್ಡ ಶ್ರೀ ಮಾಲತೇಶ ಸ್ವಾಮಿ ದೇವರ ದರ್ಶನ ಪಡೆದುಕೊಂಡು ವಾಪಸ್​ ಬೆಂಗಳೂರಿಗೆ ತೆರಳುವ ಸಲುವಾಗಿ ರಾಣೆಬೆನ್ನೂರ ನಗರದ ಹೊರವಲಯದ ಜಾನುವಾರು ಮಾರುಕಟ್ಟೆ ಬಳಿ ಎನ್​ಎಚ್​&48 ರಸ್ತೆ ಸೇರುವ ಬಿಳಿಗಿರಿರಂಗನದಿಟ್ಟು ರಾಜ್ಯ ಹೆದ್ದಾರಿ ಮೂಲಕ ಬಂದಿದ್ದಾರೆ.

ಆದರೆ, ರಾಜ್ಯ ಹೆದ್ದಾರಿ ರಾಣೆಬೆನ್ನೂರ ಸೇರುವ ಮಾರ್ಗದಲ್ಲಿ ಕೊಂಚ ಕಾಮಗಾರಿ ಅರ್ಧಕ್ಕೆ ನಿಂತಿದ್ದು ರಸ್ತೆಯುದ್ದಕ್ಕೂ ಮಳೆಯಿಂದ ಕೆಸರು ತುಂಬಿಕೊಂಡಿದೆ. ಇದನ್ನು ಅರಿಯದ ಜ್ಞಾನೇಶ ಇದೇ ರಸ್ತೆ ಮಾರ್ಗವಾಗಿ ಬಂದಿದ್ದರಿಂದ ಕಾರು ಕೆಸರಿನಲ್ಲಿ ಸಿಲುಕಿಕೊಂಡು ಪರದಾಡಿದ್ದಾರೆ.

ನಂತರ ದಾರಿಹೋಕರೊಬ್ಬರು ತಮ್ಮ ಕಾರಿನಲ್ಲಿದ್ದ ಹಗ್ಗ ಕಟ್ಟಿ ಜ್ಞಾನೇಶ ಅವರ ಕಾರನ್ನು ಹೊರ ತೆಗೆದಿದ್ದಾರೆ. ನಂತರ 112ಗೆ ೋನ್​ ಮಾಡಿ ಸ್ಥಳಕ್ಕೆ ಪೊಲೀಸರನ್ನು ಕರೆಯಿಸಿಕೊಂಡು ಸಮಸ್ಯೆ ಕುರಿತು ಹೇಳಿಕೊಂಡು, ಸಂಬಂಧಪಟ್ಟವರಿಗೆ ರಸ್ತೆ ಸರಿಪಡಿಸಲು ತಿಳಿಸಿ ತೆರಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net