

ಬೆಂಗಳೂರು: ಇಂದು ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಗರದ ಶ್ರೀ ಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ದೇವರ ದರ್ಶನ ಪಡೆದರು.
ಸಮಸ್ತ ಕರ್ನಾಟಕದ ಜನತೆಯ ಹೆಸರಿನಲ್ಲಿ ಅರ್ಚನೆ ಮಾಡಿಸಿದ ಸಿಎಂ ಬೊಮ್ಮಾಯಿ, ಮಂಗಳ ಆರತಿ ತಟ್ಟೆಗೆ 500 ರೂಪಾಯಿಯ ಎರಡು ನೋಟುಗಳನ್ನು ಹಾಕಿದರು. ಈ ವೇಳೆ ಸಚಿವ ಬೈರತಿ ಬಸವರಾಜ ಉಪಸ್ಥಿತರಿದ್ದರು.
ಶ್ರೀ ಕಂಠೇಶ್ವರ ದೇವಸ್ಥಾನ ಬಳಿಕ ಭಗವಾನ್ ಶ್ರೀ ಮಾರುತಿ ದೇವಾಲಯಕ್ಕೆ ಸಿಎಂ ಬೊಮ್ಮಾಯಿ ಭೇಟಿ ನೀಡಿದರು.
ಇಂದಿನ ಬಜೆಟ್ ಪ್ರಸಕ್ತ ಬಿಜೆಪಿ ಸರ್ಕಾರದ ಕೊನೆಯ ಬಜೆಟ್ ಆಗಿದೆ. ಹಣಕಾಸು ಖಾತೆಯನ್ನೂ ಹೊಂದಿರುವ ಸಿಎಂ ಬೊಮ್ಮಾಯಿ ಅವರು ಇಂದು ಬೆಳಗ್ಗೆ 10.15ಕ್ಕೆ 2ನೇ ಬಾರಿಗೆ ಬಜೆಟ್ ಮಂಡನೆ ಮಾಡಲಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜನಪ್ರಿಯ ಯೋಜನೆಗಳ ಘೋಷಣೆ ಸಾಧ್ಯತೆ ಇದೆ.