

ಬೆಂಗಳೂರು: ಪರಿಶಿಷ್ಟ ಜಾತಿ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ನಲ್ಲಿ ಶೇ.30 ಹಣ ಮೀಸಲಿಡಬೇಕು, ಅಲೆಮಾರಿ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂಬುದು ಸೇರಿ ನಾನಾ ಬೇಡಿಕೆಗಳನ್ನು ದಲಿತ ಸಂಘಟನೆಗಳ ಮುಖಂಡರು ಸಿಎಂ ಗಮನಕ್ಕೆ ತಂದರು.
ಬಜೆಟ್ ಪೂರ್ವಭಾವಿಯಾಗಿ ಸಿಎಂ ಯಡಿಯೂರಪ್ಪ ದಲಿತ ಸಂಘಟನೆಗಳ ಮುಖಂಡರ ಜತೆ ರ್ಚಚಿಸಿದರು. ಸಭೆ ಬಳಿಕ ದಲಿತ ಮುಖಂಡ ಮಾರಸಂದ್ರ ಮುನಿಯಪ್ಪ ಮಾತನಾಡಿ, ವಿಧಾನಸೌಧ ಪಕ್ಕ ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ಸ್ಪೂರ್ತಿ ಭವನ ನಿರ್ವಿುಸಲು ಹಿಂದಿನ ಸರ್ಕಾರ 25 ಕೋಟಿ ರೂ. ಮೀಸಲಿಟ್ಟಿದೆ. ಅದನ್ನು ಬಳಸಿಕೊಳ್ಳಬೇಕು. ದಲಿತರಿಗೆ ಮೀಸಲಿಟ್ಟ ಅನುದಾನ ಬಳಕೆ ಬಗ್ಗೆ ಸಿಎಂ ಗಮನಕ್ಕೆ ತಂದಿದ್ದು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮ, ಆದಿಜಾಂಬವ ನಿಗಮ, ಲಂಬಾಣಿ ಮತ್ತು ಭೋವಿ ನಿಗಮಗಳಿಗೆ ಬಜೆಟ್ನಲ್ಲಿ ತಲಾ 2 ಸಾವಿರ ಕೋಟಿ ರೂ. ಅನುದಾನ ಹಂಚಿಕೆ ಮಾಡುವಂತೆಯೂ ಆಗ್ರಹಿಸಿರುವುದಾಗಿ ತಿಳಿಸಿದರು.