ರಾಜ್ಯ ಬಜೆಟ್ 2024 ಕ್ಷಣಗಣನೆ ಆರಂಭ; ಈಡೇರಲಿದೆಯಾ ರೈತರ ಬೇಡಿಕೆಗಳು?

Untitled design - 2024-02-16T090430.862
Published on

ಬೆಂಗಳೂರು: ಇಂದು (ಫೆ.26) 2024-25ನೇ ಸಾಲಿನ ರಾಜ್ಯ ಬಜೆಟ್​ಗೆ ಕ್ಷಣಗಣನೆ ಆರಂಭಗೊಂಡಿದ್ದು, ಇಂದು ಬೆಳಗ್ಗೆ 10:15ಕ್ಕೆ​ ಸಿಎಂ ಸಿದ್ದರಾಮಯ್ಯ ಬಜೆಟ್​ ಮಂಡಿಸಲಿದ್ದಾರೆ. ಈ ಮೂಲಕ 15ನೇ ಬಾರಿಗೆ ಬಜೆಟ್​ ಮಂಡಿಸಿ, ಹೊಸ ದಾಖಲೆಗೆ ಸಜ್ಜಾಗಿದ್ದಾರೆ. ಲೋಕಸಭೆ ಚುನಾವಣೆ ಸಮೀಪಿಸುವ ಮುನ್ನ ಬಜೆಟ್​ ಘೋಷಿಸಲು ಮುಂದಾಗಿರುವ ಮುಖ್ಯಮಂತ್ರಿಗಳು, ಈ ಬಾರಿ ಜನರಿಗೆ ಹೊರಯಾಗದಂತೆ, ಲಾಭದಾಯಕವಾಗುವಂತೆ ನಡೆಸಿಕೊಡಬಹುದು ಎಂಬ ನಿರೀಕ್ಷೆ ಹೆಚ್ಚಿದೆ.

ಇದೆಲ್ಲದರ ನಡುವೆ ಬಜೆಟ್ ಮೇಲಿನ ನಿರೀಕ್ಷೆಗಳು ಉತ್ತುಂಗದಲ್ಲಿದ್ದು, ಯಾವ ಕ್ಷೇತ್ರಗಳಿಗೆ ಲಾಭ? ಯಾರಿಗೆ ನಿರಾಸೆ? ಎಂಬ ಪ್ರಶ್ನೆ ಸದ್ಯ ಎಲ್ಲರಲ್ಲೂ ಮೂಡಿದೆ. ಕಳೆದ ಬಾರಿ ಸಿದ್ದರಾಮಯ್ಯ ಸರ್ಕಾರ ಮಂಡಿಸಿದ ಬಜೆಟ್​ಗಿಂತರಲೂ ಇಂದಿನ ಬಜೆಟ್​ ಗಾತ್ರ ದೊಡ್ಡದಾಗಿದೆ ಎಂದು ಮೂಲಗಳು ತಿಳಿಸಿವೆ. ಅಧಿಕಾರಕ್ಕೆ ಬಂದಾಗ ರಾಜ್ಯದಲ್ಲಿ ಮಧ್ಯಂತರ ಬಜೆಟ್​ ಮಂಡಿಸಿದ್ದ ಸಿಎಂ ಅವರ ಬಜೆಟ್​ ಗಾತ್ರ 3 ಲಕ್ಷದ 37 ಸಾವಿರ ಕೋಟಿಯಷ್ಟಿತ್ತು. ಆದರೆ, 2024-35ನೇ ಸಾಲಿನ ಬಜೆಟ್​ ಮೊತ್ತ 3 ಲಕ್ಷ 80 ಸಾವಿರ ಕೋಟಿಯಷ್ಟು ಇರಲಿದೆ ಎಂದು ಹೇಳಲಾಗಿದೆ.

ಬಜೆಟ್​ ನಿರೀಕ್ಷೆಗಳು ಹೀಗಿವೆ: ರೈತರನ್ನು ಮದುವೆಯಾಗುವ ಹೆಣ್ಣಿಗೆ 5 ಲಕ್ಷ ಘೋಷಣೆ, ಬರ ಪರಿಹಾರ 10,000 ಹೆಚ್ಚಳ ನಿರೀಕ್ಷೆ, ರೈತರಿಗೆ 5 ಲಕ್ಷ ಜೀವ-ಆರೋಗ್ಯ ವಿಮೆ, ಬೆಂಬಲ ಬೆಲೆ ನಿರೀಕ್ಷೆ, ಕೃಷಿ ಯಂತ್ರೋಪಕರಣ, ರಸಗೊಬ್ಬರದ ಸಬ್ಸಿಡಿ ಹೆಚ್ಚಳ, ಹಾಲು ಉತ್ಪಾದಕರಿಗೆ 5-10 ರೂ. ಪ್ರೋತ್ಸಾಹ ಧನದ ನಿರೀಕ್ಷೆ, ಕೊಬ್ಬರಿ ಬೆಂಬಲ ಬೆಲೆ ಕ್ವಿಂಟಾಲ್‌ಗೆ 15,000 ರೂ. ಘೋಷಣೆ, ರಬ್ಬರ್‌ ಬೆಳೆಗೆ ಬೆಂಬಲ ಬೆಲೆ ಘೋಷಣೆ ಸಾಧ್ಯತೆ, ಮಧ್ಯಪ್ರಿಯರಿಗೆ ಶಾಕ್ ಕಾಡಲಿದ್ಯಾ? ಬೆಂಗಳೂರು ಸಂಚಾರ, ರಾಜಧಾನಿಯಲ್ಲಿ‌ 350 ಮೀಟರ್‌ ಎತ್ತರದ ಸ್ಕೈಡೆಕ್‌ ಗೋಪುರ ನಿರ್ಮಾಣ ನಿವಾರಣೆಗೆ ಸುರಂಗ ಮಾರ್ಗ, ಇಂದಿರಾ ಕ್ಯಾಂಟೀನ್ ಬಾಕಿ ಬಿಲ್‌ ಪಾವತಿಗೆ 110 ಕೋಟಿ ರೂ. ಹೀಗೆ ಮುಂತಾದ ನಿರೀಕ್ಷೆಗಳು ಜನರಲ್ಲಿ ಮೂಡಿವೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net