

ಬೆಂಗಳೂರು: ರಾಜ್ಯ ಸರ್ಕಾರ(State Government) ಶಕ್ತಿ ಯೋಜನೆ ಘೋಷಣೆ ಮಾಡಿ ನಾಲ್ಕು ನಿಗಮಗಳ ಬೊಕ್ಕಸವನ್ನು ಖಾಲಿ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ(BJP) ಟ್ವೀಟ್ ಮಾಡಿದೆ.
"ಸಿದ್ದರಾಮಯ್ಯ(Siddaramaiah) ಅವರ ಸರ್ಕಾರ ಶಕ್ತಿ ಯೋಜನೆ ಘೋಷಣೆ ಮಾಡಿ ಕೈ ತೊಳೆದುಕೊಂಡಿದೆ. ಆದ್ರೆ, ನಾಲ್ಕು ನಿಗಮಗಳ ಬೊಕ್ಕಸ ಮಾತ್ರ ಖಾಲಿ ಆಗುತ್ತಲೇ ಇದೆ. ನಿಗಮಗಳಿಗೆ ಬರುತ್ತಿದ್ದ ಆದಾಯದಲ್ಲಿ ಸಿಬ್ಬಂದಿಗಳ ಸಂಬಳ, ಇಂಧನ, ತೆರಿಗೆ, ವಿಮೆ ಎಂದು ಹೇಳಿ ನಿರ್ವಹಣೆ ಮಾಡಲಾಗುತ್ತಿತ್ತು" ಎಂದು ಟ್ವೀಟ್ನಲ್ಲಿ(Tweet) ಹೇಳಿದೆ.
"ಇದೀಗ ರಾಜ್ಯ ಸರ್ಕಾರ ನಿಗಮಗಳ ಮೇಲೆ ಹೊರೆ ಹಾಕಿ ಕೈಕಟ್ಟಿ ಕೂತಿದೆ. ಕೂಡಲೇ ನಿಗಮಗಳಿಗೆ ಕೊಡಬೇಕಾದ ಅನುದಾನವನ್ನು, ಶಕ್ತಿ ಯೋಜನೆಯ ಹಣವನ್ನು ಪಾವತಿ ಮಾಡದೆ ಹೋದರೆ, ರಾಜ್ಯದ ನಾಲ್ಕು ನಿಗಮಗಳು ಬೀದಿಗೆ ಬರುವುದು ಗ್ಯಾರಂಟಿ. ದಯವಿಟ್ಟು ನಿಗಮಗಳನ್ನು ಉಳಿಸಿ" ಎಂದು ಟ್ವೀಟ್ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಆರೋಪಿಸಿದೆ.