

ರಾಜಕೋಟ್: ಅವರೆಲ್ಲ ಬಹುಶಃ ನಿರುದ್ಯೋಗಿಗಳು, ಲಾಕ್ಡೌನ್ನಿಂದಾಗಿ ಕೆಲಸ ಕಳೆದುಕೊಂಡವರು. ಹೀಗಾಗಿ ಅವರಿಗೆ ಹೊಟ್ಟೆ ಹೊರೆಯುವುದು ಹೇಗಪ್ಪಾ ಎಂಬ ಚಿಂತೆಯಷ್ಟೇ ಅವರಿಗಿತ್ತು.
ಜುನಾಗಢದ ವೈಭವ್ ಚೌಕ್ನಲ್ಲಿದ್ದ ಗಜಾನಂದ ಪರಾಠಾ ಹೌಸ್ಗೆ ನುಗ್ಗಿದ ಐವರು ಅಡುಗೆ ಮನೆಗೆ ಬಂದಿದ್ದಾರೆ. ಅಲ್ಲಿ ಅವರಿಗೆ ತಿನ್ನಲು ಏನೂ ಸಿಕ್ಕಿಲ್ಲ. ಹೀಗಾಗಿ ಅಲ್ಲಿದ್ದ ಅಕ್ಕಿಯಿಂದ ಅನ್ನ ತಯಾರಿಸಿದ್ದಾರೆ. ಬಳಿಕ ಆಲೂಡ್ಡೆಯ ಸಾಂಬಾರನ್ನು ಮಾಡಿಕೊಂಡಿದ್ದಾರೆ. ಐವರು ಊಟ ಮಾಡಿಕೊಂಡು ತೆರಳಿದ್ದಾರೆ. ಬೇರೆ ಏನನ್ನೂ ಅವರು ಮುಟ್ಟಿಲ್ಲ. ಈ ದೃಶ್ಯವೆಲ್ಲ ಅಲ್ಲಿನ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.
ಇದನ್ನೂ ಓದಿ; ಟ್ರಕ್ ಅಪಘಾತಕ್ಕೆ ಬಲಿಯಾದ 23 ವಲಸೆ ಕಾರ್ಮಿಕರು
ಬೆಳಗ್ಗೆ ಹೋಟೆಲ್ ಅಡುಗೆಮನೆಯ ಬಾಗಿಲು ತೆರೆದಿರುವುದನ್ನು ಗಮನಿಸಿ ಸ್ಥಳೀಯರು ಮಾಲೀಕ ಜಿತೇಶ್ ತಂಕ್ಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಆತ ಬಂದು ಪರಿಶೀಲಿಸಿದಾಗ ಹೋಟೆಲ್ನಲ್ಲಿ ಏನೂ ಕಳವಾಗದಿರುವುದು ಕಂಡುಬಂದಿದೆ.
ಟೇಬಲ್ ಮೇಲಿದ್ದ ಐದು ಪ್ಲೇಟ್ಗಳಿಂದ ಅವರು ಊಟ ಮಾಡಿದ್ದು ಗೊತ್ತಾಗಿದೆ. ಅಡುಗೆ ತಯಾರಿಸಿದ್ದ ಪಾತ್ರೆಗಳನ್ನು ಹಾಗೆಯೇ ಬಿಟ್ಟಿದ್ದರು. ಬಂದವರು ಊಟ ತಯಾರಿಸಿಕೊಂಡು ತಿಂದು ಬರಿಗೈಯಲ್ಲಿ ಹೋಗಿದ್ದರು. ಇದರಿಂದಾಗಿ ಪೊಲೀಸರಿಗೆ ದೂರನ್ನು ನೀಡಿರಲಿಲ್ಲ.
ಆದರೆ, ಸಿಸಿ ಕ್ಯಾಮರಾದಲ್ಲಿನ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳನ್ನು ಅಪಲೋಡ್ ಮಾಡಿದ್ದರಿಂದ ಪೊಲೀಸರಿಗೆ ವಿಷಯ ಗೊತ್ತಾಗಿದೆ. ಸ್ಥಳೀಯ ಪೊಲೀಸರು ಸಿಸಿ ಕ್ಯಾಮರಾ ದೃಶ್ಯಗಳನ್ನು ವಶಕ್ಕೆ ಪಡೆದು ಮಾಲೀಕರ ಹೇಳಿಕೆ ದಾಖಲಿಸಿಕೊಂಡಿದ್ದಾರೆ.