ಮಾಜಿ ಗೆಳೆಯ, ಅತನ ಸ್ನೇಹಿತೆಯನ್ನು ಕೊಂದ ಆರೋಪದಲ್ಲಿ ಸ್ಟಾರ್ ಹೀರೋಯಿನ್ ತಂಗಿ ಆಲಿಯಾ ಅರೆಸ್ಟ್​​ | Alia

Alia
Published on

ನ್ಯೂಯಾರ್ಕ್​: ತನ್ನ ಮಾಜಿ ಗೆಳೆಯ ಮತ್ತು ಅತನ ಸ್ನೇಹಿತೆಯನ್ನು ಕೊಲೆ ಮಾಡಿದ ಆರೋಪದ ಮೇಲೆ ಬಾಲಿವುಡ್​ ನಟಿ ನರ್ಗಿಸ್​ ಫಕ್ರಿ ಅವರ ಸಹೋದರಿ ಆಲಿಯಾ ಫಕ್ರಿ(Alia) ಅವರನ್ನು ಅಮೆರಿಕಾದ ನ್ಯೂಯಾರ್ಕ್​ನಲ್ಲಿ ಇತ್ತೀಚಿಗೆ ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಅಲಿಯಾ ಫಕ್ರಿ ಅವರನ್ನು ಇದೇ ನ.26 ರಂದು ಬಂಧಿಲಾಗಿದೆ. ಅಲ್ಲದೆ, ಇವರ ವಿರುದ್ಧ ತನ್ನ ಮಾಜಿ ಗೆಳೆಯ ಮತ್ತು ಅತನ ಸ್ನೇಹಿತನನ್ನು ಬೆಂಕಿ ಹಚ್ಚಿ ಕೊಲೆ ಮಾಡಿರುವ ಆರೋಪದ ಮೇಲೆ ಕೋರ್ಟ್​ನಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದೆ.ಈ ವರೆಗೂ ಕೋರ್ಟ್​ ಇವರ ಈ ವಿಷಯದಲ್ಲಿ ಜಾಮೀನು ನಿರಾಕರಿಸಿದೆ. ಒಂದು ವೇಳೆ ಆರೋಪ ಸಾಬೀತಾದರೆ, ಆಲಿಯಾ ಜೈಲಿನಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ವರದಿಗಳು ಉಲ್ಲೇಖಿಸಿವೆ.

ಆಲಿಯಾ ಫಕ್ರಿ ಅವರ ತಾಯಿ ಮೇರಿ ಈ ಪ್ರಕರಣವನ್ನು ಅಲ್ಲಗೆಳೆದಿದ್ದಾರೆ. ತಮ್ಮ ಮಗಳನ್ನು ಸಮರ್ಥಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಮತ್ತು ನಮ್ಮ ಮಹಳಿಗೆ ಯಾವುದೇ ಸಂಬಂಧವಿಲ್ಲ. ಅವಳಿಗೆ ಬೆಂಕಿ ಕಂಡರೆ ಆಗುವುದಿಲ್ಲ. ಅವಳು ಬೆಂಕಿ ಇಟ್ಟು ಕೊಲ್ಲಲ್ಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಪ್ರಕರಣದ ಹಿನ್ನೆಲೆ..

ಅಲಿಯಾ ಫಕ್ರಿ(43) ಅವರು ನ.23ರಂದು ಕ್ವೀನ್ಸ್​ ಬರೋಡದಲ್ಲಿ ಇರುವ ಗ್ಯಾರೇಜ್​ಗೆ ನೇರವಾಗಿ ಬಂದು ಉದ್ದೇಶಪೂರ್ವಕವಾಗಿ ಗ್ಯಾರೇಜ್​ಗೆ ಬೆಂಕಿ ಇಟ್ಟಿದ್ದಾರೆ. ಈ ಹಿನ್ನೆಲೆ ಗ್ಯಾರೇಜ್​ ಒಳಗಿದ್ದ ಮಾಜಿ ಗೆಳೆಯಾ ಎಡ್ವರ್ಡ್​ ಜೇಕಬ್​(35), ಮತ್ತು ಅತನ ಸ್ನೇಹಿತೆ ಅನಸ್ತಾಸಿಯಾ ಎಟಿಯನ್ನೆ(33) ಕೊಂದಿದ್ದಾಳೆ ಎಂದು ಪ್ರಾಸಿಕ್ಯೂಟರ್​ಗಳು ಆರೋಪಿಸಿದ್ದಾರೆ.

ಮಾಜಿ ಗೆಳೆಯ ಎಡ್ವರ್ಡ್​ ಜೇಕಬ್ ಅವರು ಒಂದು ವರ್ಷದ ಹಿಂದೆ ಫಕ್ರಿಯಿಂದ ದೂರ ಇದ್ದರು. ಸಂಬಂಧದ ಬಗೆಗಿನ ಗಲಾಟೆಯಿಂದ ಈ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ, (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net