ದಳಪತಿ ವಿಜಯ್ ಚಿತ್ರದಲ್ಲಿ ಮಾಜಿ ಕ್ರಿಕೆಟಿಗ! ಶಿಳ್ಳೆ ಹೊಡೆಯಲು ರೆಡಿನಾ ಅಂದ್ರು ಸಿಎಸ್​ಕೆ ಫ್ಯಾನ್ಸ್​

ವಿಜಯವಾಣಿ - 2024-09-04T102444.579
Published on

ತಮಿಳುನಾಡು: ತಮಿಳು ನಟ, ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ 'ದಿ ಗ್ರೇಟೆಸ್ಟ್​ ಆಫ್​ ಆಲ್​ ಟೈಮ್​' (GOAT) ಸಿನಿಮಾ ಇದೇ ಸೆ.05ರಂದು ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಜ್ಜಾಗಿದೆ. ಈ ಹಿಂದಿನಿಂದಲೂ ವಿಜಯ್ ಸಿನಿಮಾ ಅಂದರೆ ಅಲ್ಲಿ ಆ್ಯಕ್ಷನ್​, ಮನರಂಜನೆಗೆ ಹೇಳಿಮಾಡಿಸಿದ ಅಂಶಗಳಿರುತ್ತವೆ ಎಂಬುದು ಸಿನಿಪ್ರಿಯರ ನಿರೀಕ್ಷೆ. ಸದ್ಯ ಭಾರೀ ಕುತೂಹಲ ಕೆರಳಿಸಿರುವ ಗೋಟ್​ ಚಿತ್ರ ಮೊದಲ ದಿನವೇ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಲಿದ್ಯಾ ಎಂಬುದನ್ನು ಸದ್ಯ ಕಾದು ನೋಡಬೇಕಿದೆ.

ವೆಂಕಟೇಶ್ ಪ್ರಭು ನಿರ್ದೇಶನದಲ್ಲಿ ಮೂಡಿಬಂದಿರುವ 'ಗೋಟ್'​ ಚಿತ್ರದಲ್ಲಿ ಹಲವು ನಿರೀಕ್ಷೆಗೂ ಮೀರಿದ ಅಂಶಗಳಿವೆ ಎಂದು ಹೇಳಲಾಗಿದೆ. ಆ ಪೈಕಿ ಮೊದಲ ಸರ್ಪ್ರೈಸ್​ ಚಿತ್ರದ ಬಿಡುಗಡೆಗೆ ಒಂದು ದಿನ ಬಾಕಿ ಇರುವಂತೆಯೇ ಹೊರಬಿದ್ದಿದೆ. ಕ್ರಿಕೆಟ್ ಲೋಕದಲ್ಲಿ ತಮ್ಮ ವಿಶೇಷ ಬ್ಯಾಟಿಂಗ್​ ವೈಖರಿ ಹಾಗೂ ಆಲ್​ರೌಂಡರ್​ ಪ್ರದರ್ಶನದಿಂದ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದ ಸುಬ್ರಮಣಿಯಂ ಬದ್ರಿನಾಥ್​ ಇದೀಗ ವಿಜಯ್ ಅಭಿನಯದ ಗೋಟ್ ಚಿತ್ರದಲ್ಲಿ ವಿಶೇಷ ಪಾತ್ರವೊಂದನ್ನು ನಿರ್ವಹಿಸಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಅತ್ಯುತ್ತಮ ಆಲ್​ರೌಂಡರ್​ ಪ್ರದರ್ಶನ ನೀಡುತ್ತಿದ್ದ ಬದ್ರಿನಾಥ್​, ಇದೀಗ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ. ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬದ್ರಿ, ಈ ಹಿಂದೆ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಮತ್ತು ಸಿಎಸ್​ಕೆ ತಂಡಗಳ ಪರ ಐಪಿಎಲ್​ ಆಡಿದ್ದರು. ಮೂಲತಃ ತಮಿಳುನಾಡಿನವರಾದ ಸುಬ್ರಮಣಿಯಂ, ಪ್ರಸ್ತುತ ತಮಿಳು ಕಮೆಂಟೇಟರ್​ ಆಗಿ ಕೆಲಸ ಮಾಡುತ್ತಿದ್ದಾರೆ. ಸದ್ಯ ವಿಜಯ್ ಚಿತ್ರದಲ್ಲಿ ಬದ್ರಿನಾಥ್ ಅವರ ಪಾತ್ರವೇನು? ಹೇಗಿರಲಿದೆ ಎಂಬುದು ನಾಳೆ ಸ್ಪಷ್ಟವಾಗಿ ತಿಳಿಯಲಿದೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net