

ಮುಂಬೈ: ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ರಿಲಯನ್ಸ್ ಸಂಸ್ಥಾಪಕ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಅವರ ಅದ್ಧೂರಿ ವಿವಾಹ ಸಮಾರಂಭಕ್ಕೆ ಚಿತ್ರರಂಗದ ಕಲಾವಿದರು, ರಾಜಕೀಯ ಗಣ್ಯರು, ಉದ್ಯಮಿಗಳು ಸೇರಿದಂತೆ ಹೆಸರಾಂತ ವ್ಯಕ್ತಿಗಳು ಅನಂತ್ ಮದುವೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಿರುವ ಮುಖೇಶ್ ಅಂಬಾನಿ ದಂಪತಿಯ ಪುತ್ರನ ಗ್ರ್ಯಾಂಡ್ ವಿವಾಹ ಮಹೋತ್ಸವ, ವಿದೇಶಿಗರನ್ನು ಕೂಡ ಬೆರಗಾಗುವಂತೆ ಮಾಡಿದೆ.
ಈ ಹಿಂದೆ ಯಾರೂ ಇಷ್ಟು ಅದ್ಧೂರಿಯಾಗಿ, ಬಹುದಿನಗಳ ಕಾಲ ಮದುವೆ ಮಾಡಿದ್ದನ್ನು ಕಾಣದ, ಕೇಳದ ಭಾರತೀಯರು ಮತ್ತು ವಿದೇಶಿಗರು ಒಂದು ನಿಮಿಷ ಇದು ಕಲ್ಪನೆಗೂ ಮೀರಿದ್ದ ಎಂದು ಪ್ರಶ್ನಿಸಿಕೊಳ್ಳುವ ಮಟ್ಟಕ್ಕೆ ಅಂಬಾನಿ ಕುಟುಂಬ ಈ ಮದುವೆ ಕಾರ್ಯಕ್ರಮಗಳನ್ನು ನೆರವೇರಿಸಿದೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ದಂಪತಿಗೆ ವ್ಯಾಪಕ ಅಭಿನಂದನೆಗಳು ಹರಿದುಬರುತ್ತಿವೆ. ಡಬ್ಲ್ಯೂಡಬ್ಲ್ಯೂಇ ಸೂಪರ್ಸ್ಟಾರ್ ಜಾನ್ ಸೀನಾ ಅನಂತ್ ಮದುವೆಗೆ ಆಗಮಿಸಿದ್ದು, ನವಜೋಡಿಗಳನ್ನು ಹರಸಿ, ಸಾಂಪ್ರಾದಾಯಿಕ ಉಡುಗೆಯಲ್ಲಿ ಡೋಲು ಸದ್ದಿಗೆ ಕುಣಿದು ಕುಪ್ಪಳಿಸಿದರು.
ಅನಂತ್-ರಾಧಿಕಾ ಮದುವೆ ಸಮಾರಂಭದಲ್ಲಿ ಬಹುತೇಕ ಸ್ಟಾರ್ ಸೆಲೆಬ್ರಿಟಿಗಳು ಗೈರುಹಾಜರಾಗಿರುವುದು ಅವರ ಅಭಿಮಾನಿಗಳಲ್ಲಿ ಭಾರೀ ಬೇಸರ ಮೂಡಿಸಿದೆ. ಹಾಗಾದ್ರೆ, ಯಾರೆಲ್ಲಾ ಅಂಬಾನಿ ಪುತ್ರನ ವಿವಾಹ ಕಾರ್ಯಕ್ರಮವನ್ನು ಮಿಸ್ ಮಾಡಿಕೊಂಡರು ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.