ಮಾತನಾಡಲು ಕರೆಸಿ ಹಲ್ಲೆ ನಡೆಸಿದ ನಾಲ್ವರು ಆರೋಪಿಗಳ ಬಂಧನ

arrested
Published on

ಮಂಗಳೂರು: ಮಾತನಾಡಲು ಇದೆ ಎಂದು ಕರೆಸಿ ಯುವಕ ಹಾಗೂ ಆತನ ಗೆಳೆಯರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ,


ಬಂಧಿತರನ್ನು ಕದ್ರಿ ಮಲ್ಲಿಕಟ್ಟೆ ನಿವಾಸಿ ಮೊಹಮ್ಮದ್ ತುಫೈಲ್ (20), ನೀರುಮಾರ್ಗ ನಿವಾಸಿ ಮಹಮ್ಮದ್ ಅಫ್ರೀದ್ (19), ಮುಕ್ಷುದ್ ಸಾಗ್ (21) ಮತ್ತು ಬೋಳಾರ ನಿವಾಸಿ ಅಬ್ದುಲ್ ಸತ್ತಾರ್ (19) ಎಂದು ಗುರುತಿಸಲಾಗಿದೆ.


ಜೂನ್ 16 ರಂದು ರಾತ್ರಿ ಮಂಗಳೂರು ನಗರದ ಅಲೋಶಿಯಸ್ ಕಾಲೇಜು ಕಂಪೌಂಡ್ ಎದುರುಗಡೆ ಸಾರ್ವಜನಿಕ ಸ್ಥಳದಲ್ಲಿ ಕಿನ್ನಿಗೋಳಿ ಏಳಿಂಜೆ ನಿವಾಸಿ ಪ್ರಿಯಾ ಪಿಂಟೊ ಎಂಬಾಕೆ ನಿದೀಶ್ ಎಂಬಾತನಲ್ಲಿ ಇನ್ಸ್ಟಾಗ್ರಾಂ ಆಪ್ ಮೂಲಕ ಸಂಪರ್ಕ ಮಾಡಿ ಮಾತನಾಡಲು ಬರುವಂತೆ ತಿಳಿಸಿದ್ದು, ನಿದೀಶ್ ತನ್ನ ಇತರ ಇಬ್ಬರು ಸ್ನೇಹಿತರೊಂದಿಗೆ ಅಲ್ಲಿ ಆಗಮಿಸಿದ್ದ ವೇಳೆ ಪ್ರಿಯಾ ಪಿಂಟೊ ಸ್ನೇಹಿತರಾದ ನಾಲ್ವರು ಆರೋಪಿಗಳು ಆಲ್ಟೋ ಕಾರಿನಲ್ಲಿ ಬಂದು ನಿದೀಶ್ ಮತ್ತು ಇತರರಲ್ಲಿ ಗಲಾಟೆ ಮಾಡಿ ನೀದಿಶ್ ಗೆ ಅವಾಚ್ಯ ಶಬ್ದಗಳಿಂದ ಬೈದು ಜೀವಬೆದರಿಕೆ ಹಾಕಿ ಜೊತೆಯಲ್ಲಿದ್ದವರಿಗೂ ಹಲ್ಲೆ ನಡೆಸಿದ್ದು ಈ ಸಂಬಂಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ನಗರದ ಕುಡುಪು ಬೈತುರ್ಲಿ ಪಕ್ಕದ ವಿಶ್ವಾಸ್ ಹೆರಿಟೇಲ್ ಪ್ಲಾೃಟ್‌ನಿಂದ ಬಂಧಿಸಿದ್ದಾರೆ.ಬಂಧಿತ ಆರೋಪಿ ತುಫೈಲ್ ಮತ್ತು ಅಫ್ರಿದ್ ವಿರುದ್ದ ಬೆಂಗಳೂರು ಮಡಿವಾಳ ಪೊಲೀಸ್ ಠಾಣೆಯಲ್ಲಿ ಮತ್ತು ಕೇರಳದ ಅರವೂರು ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಪ್ರಕರಣ ದಾಖಲಾಗಿದೆ. ಮುಕ್ಷುದ್ ಸಾಗ್ ವಿರುದ್ದ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪೊಕ್ಸೋ ಪ್ರಕರಣ ಈ ಹಿಂದೆ ದಾಖಲಾಗಿದೆ.

ಎಂಎನ್‌ಜಿ 18 ಜೂನ್ ಮೊಹಮ್ಮದ್ ತುಫೈಲ್
ಎಂಎನ್‌ಜಿ 18 ಜೂನ್ ಮಹಮ್ಮದ್ ಅಫ್ರೀದ್
ಎಂಎನ್‌ಜಿ 18 ಜೂನ್ ಮುಕ್ಷುದ್ ಸಾಗ್
ಎಂಎನ್‌ಜಿ 18 ಜೂನ್ ಅಬ್ದುಲ್ ಸತ್ತಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net