ರಾಜ್ಯಮಟ್ಟದ ಮಹಿಳಾ ನೆಟ್‌ಬಾಲ್ ಪಂದ್ಯಾವಳಿ

mng-29mar-netball
ಅಂತರ್ ಕಾಲೇಜು ಪುರುಷರ ನೆಟ್‌ಬಾಲ್ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಎಸ್‌ಜೆಇಸಿಯ ಸಹಾಯಕ ನಿರ್ದೇಶಕ ಫಾ. ಅಲ್ವಿನ್ ರಿಚರ್ಡ್ ಡಿಸೋಜ , ಫಾ.ವಿಲ್ಫ್ರೆಡ್ ಪ್ರಕಾಶ್ ಡಿಸೋಜ ಅಧ್ಯಕ್ಷತೆ ಮುಂತಾದವರು ಉಪಸ್ಥಿತರಿದ್ದರು.
Published on

ಮಂಗಳೂರು: ಸೇಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ವತಿಯಿಂದ ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ.( ವಿಟಿಯು )ಅಂತರ್ ಕಾಲೇಜು ಪುರುಷರ ನೆಟ್‌ಬಾಲ್ ಮತ್ತು ರಾಜ್ಯ ಮಟ್ಟದ ಮಹಿಳಾ ನೆಟ್‌ಬಾಲ್ ಪಂದ್ಯಾವಳಿ ನಡೆಯಿತು.

ಎಸ್‌ಜೆಇಸಿಯ ಸಹಾಯಕ ನಿರ್ದೇಶಕ ಅಲ್ವಿನ್ ರಿಚರ್ಡ್ ಡಿಸೋಜ ಭಾಗವಹಿಸಿದ್ದರು. ಸಂಸ್ಥೆಯ ನಿರ್ದೇಶಕ ವಿಲ್ಫ್ರೆಡ್ ಪ್ರಕಾಶ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು.

ಪ್ರಾಂಶುಪಾಲ ಡಾ.ರಿಯೋ ಡಿಸೋಜ, ಉಪ ಪ್ರಾಂಶುಪಾಲ ಡಾ.ಪುರುಷೋತ್ತಮ ಚಿಪ್ಪಾರ್, ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ರಮಾನಂದ ಎಚ್.ಎಸ್., ಕಾಲೇಜಿನ ಮಾನವ ಸಂಪನ್ಮೂಲ ವ್ಯವಸ್ಥಾಪಕ ರಾಕೇಶ್ ಲೋಬೊ ಉಪಸ್ಥಿತರಿದ್ದರು. ಕ್ರೀಡಾ ಸಲಹೆಗಾರ ಪೂರ್ಣೇಶ್ ಎಂ ಸ್ವಾಗತಿಸಿ, ಪಿಇಡಿ ವನೀಶಾ ರೋಡ್ರಿಗಸ್ ವಂದಿಸಿದರು. ಜೋಯಲ್ ಡಿಮೆಲ್ಲೊ ಮತ್ತು ಸ್ಮಿತಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net