

ಬೆಂಗಳೂರು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಎಸ್ಸೆಸ್ಸೆಎಲ್ಸಿ ಪರೀಕ್ಷೆ-2ರ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಜೂ.7ರಿಂದ 14ರವರೆಗೆ ನಡೆಸಲು ತೀರ್ಮಾನಿಸಿದ್ದ ಪರೀಕ್ಷೆಯನ್ನು ಜೂ.14ರಿಂದ 22ರವರೆಗೆ ನಡೆಸುವುದಾಗಿ ಪ್ರಕಟಿಸಿದೆ.
ಎಲ್ಲ ಪರೀಕ್ಷೆಗಳು ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿವೆ. ಪರಿಷ್ಕೃತ ವೇಳಾಪಟ್ಟಿಯನ್ನು ಮಂಡಳಿಯ ಜಾಲತಾಣದಲ್ಲಿ ಪಡೆದು ಶಿಕ್ಷಕರು ಶಾಲಾ ಸೂಚನಾ ಲಕದಲ್ಲಿ ಪ್ರಕಟಿಸಬೇಕು. ಈ ಕುರಿತು ಎಲ್ಲ ಜಿಲ್ಲಾ ಉಪನಿರ್ದೇಶಕರು ಕ್ರಮ ವಹಿಸುವಂತೆ ಮಂಡಳಿ ಅಧ್ಯಕ್ಷರು ಸೂಚಿಸಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಮೇ 29ರಿಂದ ಜೂ.13ರವರೆಗೆ ವಿಶೇಷ ಪರಿಹಾರ ಬೋಧನಾ ತರಗತಿಗಳನ್ನು ನಡೆಸಲಾಗುತ್ತಿದೆ.
ವೇಳಾಪಟ್ಟಿ
ಜೂ.14 ಕನ್ನಡ
ಜೂ.15 ಹಿಂದಿ, ಎನ್‌ಎಸ್‌ಕ್ಯುಎ್ ವಿಷಯಗಳು
ಜೂ.18 ಗಣಿತ
ಜೂ.20 ವಿಜ್ಞಾನ
ಜೂ.21 ಇಂಗ್ಲಿಷ್
ಜೂ.22 ಸಮಾಜ ವಿಜ್ಞಾನ