ಹರ್ಷಿತಾಗೆ ವೈದ್ಯಳಾಗುವ ಕನಸು

Harshita_topper
Published on

ತುಮಕೂರು: ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ದ್ವಿತೀಯ ಟಾಪರ್ ಆಗಿ ಹೊರಹೊಮ್ಮಿರುವ ಶಿರಾ ನಗರದ ಶ್ರೀ ವಾಸವಿ ವಿದ್ಯಾಸಂಸ್ಥೆಯ ಡಿ.ಎಂ.ಹರ್ಷಿತಾಗೆ ವೈದ್ಯಳಾಗುವು ಕನಸಿದೆ. 624 ಅಂಕ ಪಡೆದಿರುವ ಹರ್ಷಿತಾಗೆ ಈ ಫಲಿತಾಂಶದ ನಿರೀಕ್ಷೆ ಇತ್ತು. ಗಣಿತದಲ್ಲಿ ಒಂದು ಅಂಕ ಬಿಟ್ಟು ಇನ್ನೆಲ್ಲಾ ವಿಷಯಗಳಲ್ಲಿ ಪರಿಪೂರ್ಣ ಅಂಕ ಪಡೆದಿದ್ದಾಳೆ.

ಮನೆ ಪಾಠಕ್ಕೆ ಹೋಗದೆ ಶಾಲೆಯಲ್ಲಿ ಹೆಚ್ಚಿನ ಶ್ರಮಹಾಕಿ ಓದುತ್ತಿದ್ದೆ. ಪ್ರತಿನಿತ್ಯ ರಾತ್ರಿ 12ರವರೆಗೆ ಓದುತ್ತಿದ್ದೆ. ಶಿಕ್ಷಕರ ಉತ್ತಮ ಮಾರ್ಗದರ್ಶನ ಇತ್ತು. ಮನೆಯಲ್ಲು ಅಪ್ಪ-ಅಮ್ಮ ಬೆನ್ನೆಲುಬಾಗಿದ್ದರು. ಪಿಯುಸಿಯಲ್ಲಿ ವಿಜ್ಞಾನ ವಿಷಯ (ಪಿಸಿಎಂಬಿ) ಆಯ್ಕೆ ಮಾಡಿಕೊಳ್ಳಲಿದ್ದು ವೈದ್ಯಳಾಗಬೇಕೆಂಬ ಕನಸಿದೆ ಎನ್ನುವ ಹರ್ಷಿತಾ ಒಂದನೇ ತರಗತಿಯಿಂದ ಕ್ಲಾಸಿಗೆ ಫಸ್ಟ್. ಈಗ ರಾಜ್ಯಕ್ಕೆ ಸೆಕೆಂಡ್ ಟಾಪರ್ ಎನಿಸಿರುವುದು ತುಂಬಾ ಖುಷಿ ತಂದಿದೆ ಎನ್ನುತ್ತಾಳೆ.

ಗ್ರಾಮೀಣ ಜನರಿಗೆ ಉಚಿತ ವೈದ್ಯಕೀಯ ಸೇವೆ ನೀಡಬೇಕೆಂಬ ಮಹಾದಸೆ ಹೊಂದಿರುವ ಹರ್ಷಿತಾ ತಂದೆ ಶಿಕ್ಷಕ ಮಂಜುನಾಥ್ ಶಿರಾ ತಾಲೂಕು ಬುಕ್ಕಾಪಟ್ಟಣ ಕ್ಲಸ್ಟರ್‌ನ ಸಿಆರ್‌ಪಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ತಾಯಿ ಮಂಜುಳಾ ಗೃಹಿಣಿ. ಮೂಲತಃ ಚಿಕ್ಕನಾಯಕನಹಳ್ಳಿ ತಾಲೂಕಿನ ದೇವರಹಳ್ಳಿ.

ಮೊದಲೇ ನಿರೀಕ್ಷೆ ಇತ್ತು. ರಾಜ್ಯಕ್ಕೆ ಸೆಕೆಂಡ್ ಟಾಪರ್ ಆಗಿರುವುದು ತುಂಬಾ ಖುಷಿ ತಂದಿದೆ. ಶಿಕ್ಷಕರ ಮಾರ್ಗದರ್ಶನ, ಅಪ್ಪ-ಅಮ್ಮನ ಸಹಕಾರ ಇತ್ತು. ಪಿಯುಸಿಯಲ್ಲಿ ಪಿಸಿಎಂಬಿ ಆಯ್ಕೆ ಮಾಡಿಕೊಳ್ಳಲಿದ್ದು ವೈದ್ಯಳಾಗಬೇಕೆಂಬ ಗುರಿ ಇದೆ. ಡಿ.ಎಂ.ಹರ್ಷಿತಾ ರಾಜ್ಯಕ್ಕೆ ದ್ವಿತೀಯ ಟಾಪರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net