

ತುಮಕೂರು: ವಿದ್ಯಾರ್ಥಿಗಳಲ್ಲಿ ಕೌಶಲ್ಯಾಭಿವೃದ್ಧಿ ಕಲಿಕೆ ಸೇರಿದಂತೆ ಹಲವು ಕ್ಷೇತ್ರದಲ್ಲಿ ತರಬೇತಿಗೊಳಿಸಲು ಬೆಂಗಳೂರಿನ ಎಎಲ್‌ಎಸ್ ಟ್ರೈನಿಂಗ್ ಕಂಪನಿ ಜತೆಗೆ ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯ ಒಡಂಬಡಿಕೆ ಮಾಡಿಕೊಂಡಿದೆ.
ನಗರದ ಎಸ್‌ಎಸ್‌ಐಟಿ ಕಾಲೇಜಿನಲ್ಲಿ ಇಂದು ನಡೆದ ಸಮಾಲೋಚನೆ ಮತ್ತು ಪ್ರಗತಿ ಪರೀಶೀಲನೆಯ ನಂತರ ಉಭಯ ಸಂಸ್ಥೆಗಳ ನಡುವೆ ಪರಸ್ಪರ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ದಾಖಲೆಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು. ಈ ಒಡಂಬಡಿಕೆಗೆ ಬೆಂಗಳೂರಿನ ಎಎಲ್‌ಎಸ್‌ನ ಜನರಲ್ ಮ್ಯಾನೇಜರ್ ಸುನಿಲ್ ಹಾಗೂ ಎಸ್‌ಎಸ್‌ಐಟಿ ಪ್ರಾಚಾರ್ಯ ಡಾ. ಎಂ.ಎಸ್. ರವಿಪ್ರಕಾಶ್ ಸಹಿ ಹಾಕಿ, ದಾಖಲೆ ವಿನಿಮಯ ಮಾಡಿಕೊಂಡರು.
ಸಾಹೇ ವಿಶ್ವವಿದ್ಯಾಲಯದ ಕುಲಸಚಿವ ಡಾ.ಎಂ.ಜೆಡ್.ಕುರಿಯನ್, ಡೀನ್ ಡಾ.ಎಂ.ಸಿದ್ದಪ್ಪ , ಎಲೆಕ್ಟ್ರಿಕಲ್ ಮತ್ತು ಕಮ್ಯುನಿಕೇಶನ್ ವಿಭಾಗದ ಪ್ರಾಧ್ಯಾಪಕ ಡಾ.ಎಂ.ಎನ್.ಈಶ್ವರಪ್ಪ ಮತ್ತಿತರರು ಉಪಸ್ಥಿತರಿದ್ದರು