SSC ಪರೀಕ್ಷೆ |ಸರಿಯುತ್ತರ ಬಿಡುಗಡೆ: ಚೆಕ್‌ ಮಾಡಲು ಲಿಂಕ್ ಇಲ್ಲಿದೆ ನೋಡಿ

SSC
Published on

ಬೆಂಗಳೂರು: ಸಿಬ್ಬಂದಿ ನೇಮಕಾತಿ ಆಯೋಗ (ಎಸ್ಸೆಸ್ಸಿ)ವು ಸ್ಟೆನೋಗ್ರಾರ್ಸ್‌ ಸಿ ಹಾಗೂ ಡಿ ಹುದ್ದೆಗಳಿಗೆ ನಡೆಸಿದ ನೇಮಕಾತಿ ಪರೀಕ್ಷೆಯ ಸರಿಯುತ್ತರಗಳನ್ನು ಮಂಗಳವಾರ ಬಿಡುಗಡೆ ಮಾಡಿದ್ದು, ಅಭ್ಯರ್ಥಿಗಳು ಪರಿಶೀಲಿಸಬಹುದು.

ಎಸ್ಸೆಸ್ಸಿಯು ಅ.12 ಹಾಗೂ 13ರಂದು ಪರೀಕ್ಷೆ ನಡೆಸಿತ್ತು. ಅಭ್ಯರ್ಥಿಗಳು https://ssc.nic.in/ ವೆಬ್‌ಸೈಟ್ ಮೂಲಕ ಸರಿಯುತ್ತರ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದ್ದು, ಅ.18ರಂದು ಸಂಜೆ 6 ಗಂಟೆಯವರಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. 

ಅಭ್ಯರ್ಥಿಗಳು ತಲಾ ಪ್ರಶ್ನೆಯೊಂದಕ್ಕೆ 100 ರೂ. ಪಾವತಿ ಆಕ್ಷೇಪಣೆ ಸಲ್ಲಿಸಬಹುದು ಎಂದು ಎಸ್ಸೆಸ್ಸಿ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net