

ನವದೆಹಲಿ: ಇಂದು ಅಂದರೆ ಅಕ್ಟೋಬರ್ 17 ರಂದು ದೆಹಲಿಯ ವಿಜ್ಞಾನ ಭವನದಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭ ಆಯೋಜಿಸಲಾಗಿದೆ. ಅಧ್ಯಕ್ಷೆ ದ್ರೌಪದಿ ಮುರ್ಮು ವಿಜೇತರಿಗೆ ಪ್ರಶಸ್ತಿ ಪತ್ರ ಮತ್ತು ಪದಕಗಳನ್ನು ನೀಡುತ್ತಿದ್ದಾರೆ.
ಈ ಪ್ರಶಸ್ತಿಯನ್ನು ಆಗಸ್ಟ್ 24 ರಂದು ಘೋಷಿಸಲಾಯಿತು. ಆಲಿಯಾ ಭಟ್ಗೆ ಗಂಗೂಬಾಯಿ ಕಥಿಯಾವಾಡಿ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ. ಆಲಿಯಾ ಭಟ್ ಪ್ರಶಸ್ತಿ ಸ್ವೀಕರಿಸಲು ಪತಿ ರಣಬೀರ್ ಕಪೂರ್ ಜೊತೆ ವಿಜ್ಞಾನ ಭವನ ತಲುಪಿದರು. ಈ ದಿನ ನಟಿಗೆ ತುಂಬಾ ವಿಶೇಷವಾಗಿದೆ. ಅಂದಹಾಗೆ ಈ ಸಂದರ್ಭದಲ್ಲಿ ಅವರು ತಮ್ಮ ಮದುವೆಯ ಸೀರೆಯನ್ನು ಧರಿಸಿದ್ದರು.
ಮದುವೆ ಸೀರೆ ಉಟ್ಟಿದ್ದ ಆಲಿಯಾ ಭಟ್
ಆಲಿಯಾ ಭಟ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಿ ಗೌರವಿಸಲಾಗಿದ್ದು, ನಟಿ ತನ್ನ ಪತಿ ರಣಬೀರ್ ಕಪೂರ್ ಅವರೊಂದಿಗೆ ಈ ಪ್ರಶಸ್ತಿಯನ್ನು ಸ್ವೀಕರಿಸಲು ಬಂದಾಗ ಜನರ ಕಣ್ಣುಗಳು ಅವರ ಮೇಲೆ ಇದ್ದವು. ಈ ವಿಶೇಷ ದಿನದಂದು, ಅವರು ತನ್ನ ಮದುವೆಯ ಸೀರೆಯನ್ನು ಆರಿಸಿಕೊಂಡಿದ್ದರು. ಬಾಲಿವುಡ್‌ನ ಪ್ರಸಿದ್ಧ ಫ್ಯಾಷನ್ ಡಿಸೈನರ್ ಸಬ್ಯಸಾಚಿ ಮುಖರ್ಜಿ ವಿನ್ಯಾಸಗೊಳಿಸಿದ ಬೀಜ್ ಬಣ್ಣದ ಸೀರೆಯನ್ನು ಆಲಿಯಾ ಧರಿಸಿದ್ದರು. ಅದಕ್ಕೆ ಹೊಂದುವ ಕುಂದನ್ ಆಭರಣಗಳನ್ನು ಸಹ ಅವರು ಧರಿಸಿದ್ದು, ಇದರಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದರು. ಸದ್ಯ ಆಕೆಯ ಲುಕ್ ಮತ್ತು ಡ್ರೆಸ್ಸಿಂಗ್ ಸ್ಟೈಲ್ ಅನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ.
ಗಂಗೂಬಾಯಿ ಕಥಿಯಾವಾಡಿ ಚಿತ್ರಕ್ಕಾಗಿ ಆಲಿಯಾ ಭಟ್ ಅವರಿಗೆ ದೊರೆತ ಮೊದಲ ರಾಷ್ಟ್ರೀಯ ಪ್ರಶಸ್ತಿ ಇದಾಗಿದೆ. 'ಗಂಗೂಬಾಯಿ ಕಥಿಯಾವಾಡಿ' ಚಿತ್ರಕ್ಕಾಗಿ ಮೊದಲ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಿದೆ. ಸಂಜಯ್ ಲೀಲಾ ಬನ್ಸಾಲಿ ಅವರಿಗೆ ವಿಶೇಷ ಧನ್ಯವಾದಗಳು' ಎಂದು ನಟಿ ತಿಳಿಸಿದ್ದಾರೆ.