ರಾಜಮೌಳಿ, ಕುಟುಂಬದ ಸದಸ್ಯರಿಗೆ ಕರೊನಾ ಸೋಂಕು; ಹೋಮ್​ ಕ್ವಾರಂಟೈನ್​ನಲ್ಲಿ ನಿರ್ದೇಶಕ

Rajamouli family
Published on

ಹೈದರಾಬಾದ್​: ಖ್ಯಾತ ನಿರ್ದೇಶಕ ಎಸ್​. ಎಸ್. ರಾಜಮೌಳಿ ಹಾಗೂ ಕುಟುಂಬದ ಸದಸ್ಯರು ಕರೊನಾ ಸೋಂಕಿಗೆ ಒಳಗಾಗಿದ್ದಾರೆ. ಈ ವಿಷಯವನ್ನು ಅವರೇ ಟ್ವಿಟರ್​ ಮೂಲಕ ಬಹಿರಂಗಪಡಿಸಿದ್ದಾರೆ.

ಕೆಲ ದಿನಗಳಿಂದ ನನಗೆ ಹಾಗೂ ನನ್ನ ಕುಟುಂಬದ ಸದಸ್ಯರಿಗೆ ಸಣ್ಣದಾಗಿ ಜ್ವರ ಕಾಣಿಸಿಕೊಂಡಿತ್ತು. ತಾನಾಗಿಯೇ ಜ್ವರ ಕಡಿಮೆಯಾಗಿತ್ತು. ಆದರೂ, ಕರೊನಾ ಪರೀಕ್ಷೆಗೆ ಒಳಗಾದೆವು. ಕೋವಿಡ್​ನ ಲಘು ಸೋಂಕಿಗೆ ಒಳಗಾಗಿರುವುದಾಗಿ ವರದಿ ಬಂದಿದೆ. ಹೀಗಾಗಿ ವೈದ್ಯರ ಸಲಹೆ ಮೇರೆಗೆ ಎಲ್ಲರೂ ಮನೆಯಲ್ಲಿಯೇ ಕ್ವಾರಂಟೈನ್​ಗೆ ಒಳಗಾಗಿದ್ದೇವೆ ಎಂದು ರಾಜಮೌಳಿ ತಿಳಿಸಿದ್ದಾರೆ.

ಬಳಿಕ ಇನ್ನೊಂದು ಟ್ವೀಟ್​ ಮಾಡಿ ಆರೋಗ್ಯದಿಂದ ಇರುವುದಾಗಿ ಮತ್ತಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಕರೊನಾ ಸೋಂಕಿನ ಲಕ್ಷಣಗಳು ನಮ್ಮಲ್ಲಿ ಕಾಣಿಸಿಕೊಂಡಿಲ್ಲ. ಮೊದಲಿಗಿಂತಲೂ ಹೆಚ್ಚು ಚೇತರಿಸಿಕೊಳ್ಳುತ್ತಿದ್ದೇವೆ. ಎಲ್ಲ ಮುಂಜಾಗೃತೆ ಹಾಗೂ ನಿರ್ದೇಶನಗಳನ್ನು ಪಾಲಿಸುತ್ತಿದ್ದೇವೆ. ಪ್ಲಾಸ್ಮಾ ದಾನ ಮಾಡುವ ಉದ್ದೇಶ ಹೊಂದಿದ್ದು, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದನ್ನು ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.

ಬಾಹುಬಲಿ ಖ್ಯಾತಿಯ ನಿರ್ದೇಶಕ ಸದ್ಯ ಆರ್​ಆರ್​ಆರ್​ ಚಿತ್ರದ ಶೂಟಿಂಗ್​ನಲ್ಲಿ ತೊಡಗಿದ್ದಾರೆ. ಆಂಧ್ರ ಹಾಗೂ ತೆಲಂಗಾಣದಲ್ಲಿ ಕರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶೂಟಿಂಗ್​ ಸ್ಥಗಿತಗೊಳಿಸಲಾಗಿದೆ. ಇದೀಗ ಸ್ವತಃ ರಾಜಮೌಳಿ ಸೋಂಕಿಗೆ ಒಳಗಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net