ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಯಾರು ಗೊತ್ತಾ; ಅವರ ಗಳಿಕೆಯ ಫುಲ್​​ ಡೀಟೇಲ್ಸ್​​ ಇಲ್ಲಿದೆ

Untitled-design-2024-06-18T174825.490
Published on

ಭಾರತೀಯ ಸಿನಿಮಾ ಜಗತ್ತಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಮಾಹಿತಿಯನ್ನು IMDB ಯಿಂದ ಸಂಗ್ರಹಿಸಿದ ಮಾಹಿತಿಯೊಂದಿಗೆ ಫೋರ್ಬ್ಸ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ತಿಳಿಸಲಾಗಿದೆ. ಇದರ ಪ್ರಕಾರ 2023ರಲ್ಲಿ ಮೂರು ಹಿಟ್​ಗಳನ್ನು ನೀಡಿದ್ದ ಕಿಂಗ್​ ಆಫ್​​ ಬಾಲಿವುಡ್​ ಶಾರುಖ್​ಖಾನ್​ ಅವರು ಬಿಟೌನ್​​ನ ಫೇಮಸ್​ ನಟರಾದ ಅಮೀರ್ ಖಾನ್, ಸಲ್ಮಾನ್ ಖಾನ್ ಮತ್ತು ಅಕ್ಷಯ್ ಕುಮಾರ್ ಜತೆಗೆ ದಕ್ಷಿಣ ಭಾರತದ ಐಕಾನ್‌ಗಳಾದ ರಜನಿಕಾಂತ್, ಪ್ರಭಾಸ್, ದಳಪತಿ ವಿಜಯ್ ಮತ್ತು ಅಲ್ಲು ಅರ್ಜುನ್ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. 2024ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 10 ನಟರ ಪಟ್ಟಿಯಲ್ಲಿ ಅಮಿತಾಬ್ ಬಚ್ಚನ್ ಸೇರಿಲ್ಲ.

ಶಾರುಖ್ ಖಾನ್ ಅವರು 2024ರ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎಂದು ಬಹಿರಂಗಪಡಿಸಲಾಗಿದೆ. ಅವರು ಚಿತ್ರವೊಂದಕ್ಕೆ 150 ಕೋಟಿಗಳಿಂದ 250 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ಶಾರುಖ್ ನಂತರ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಎರಡನೇ ಸ್ಥಾನದಲ್ಲಿದ್ದು 150 ರಿಂದ 210 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎಂದು ತಿಳಿಸಿದ್ದಾರೆ. ಮೂರನೇ ಸ್ಥಾನವನ್ನು ದಳಪತಿ ವಿಜಯ್ ಪಡೆದುಕೊಂಡಿದ್ದು ಪ್ರತಿ ಚಿತ್ರಕ್ಕೆ 130 ಕೋಟಿ ರೂಪಾಯಿಗಳಿಂದ 200 ಕೋಟಿ ರೂ. ಹಾಗೂ ನಾಲ್ಕನೇ ಸ್ಥಾನದಲ್ಲಿ ನಟ ಪ್ರಭಾಸ್ ಇದ್ದು ಪ್ರತಿ ಚಿತ್ರಕ್ಕೆ 100 ರಿಂದ 200 ಕೋಟಿ ರೂಪಾಯಿ, ಟಾಪ್​ ಫೈವ್​​​ನಲ್ಲಿ ಅಮೀರ್​ ಖಾನ್​​ ಇದ್ದು ಅವರು ಪ್ರತಿ ಸಿನಿಮಾಗೆ 100 ಕೋಟಿ ಮತ್ತು 175 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.

ಸಿನಿಮಾ ಒಂದಕ್ಕೆ 100 ರಿಂದ 150 ಕೋಟಿ ರೂಪಾಯಿ ಸಂಭಾವನೆ ಪಡೆಯುವ ಮೂಲಕ ಸಲ್ಮಾನ್ ಖಾನ್ ಆರನೇ ಸ್ಥಾನದಲ್ಲಿದ್ದರೆ, ಕಮಲ್ ಹಾಸನ್ ಏಳನೇ ಸ್ಥಾನ ಪಡೆದುಕೊಂಡಿದ್ದಾರೆ. ಅವರು ಚಿತ್ರವೊಂದಕ್ಕೆ 100 ರಿಂದ 150 ಕೋಟಿ ರೂಪಾಯಿ ಪಡೆಯುತ್ತಾರೆ ಎನ್ನಲಾಗಿದೆ. ಅಲ್ಲು ಅರ್ಜುನ್ 100 ರಿಂದ 125 ಕೋಟಿ ರೂಪಾಯಿ ಸಂಭಾವನೆಯೊಂದಿಗೆ ಎಂಟನೇ ಸ್ಥಾನ, ಅಕ್ಷಯ್ ಕುಮಾರ್ ಪ್ರತಿ ಚಿತ್ರಕ್ಕೆ 60 ರಿಂದ 145 ಕೋಟಿ ರೂ. ಹಾಗೂ ಅಜಿತ್ ಕುಮಾರ್ 105 ಕೋಟಿ ರೂಪಾಯಿ ಸಂಭಾವನೆ ಪಡೆಯುವ ಮೂಲಕ ಅನುಕ್ರಮವಾಗಿ ನಂತರದ ಎರಡು ಸ್ಥಾನ ಪಡೆದುಕೊಂಡಿದ್ದಾರೆ.

ಈ ಪಟ್ಟಿಯಲ್ಲಿರುವ ಎಲ್ಲಾ ನಟರು ದೊಡ್ಡ ಬಜೆಟ್​ ಸಿನಿಮಾಗಳಲ್ಲಿ ಬಿಸಿ ಇದ್ದಾರೆ. ಶಾರುಖ್​​ ಖಾನ್ ​​ಸುಜೋಯ್ ಘೋಷ್ ಅವರ 'ಕಿಂಗ್‌'ನಲ್ಲಿ ಬಿಸಿಯಿದ್ದರೆ, ರಜನಿಕಾಂತ್ ಅವರ 'ಕೂಲಿ' ಮತ್ತು 'ವೆಟ್ಟೈಯಾನ್' ಅಭಿಮಾನಿಗಳು ಕಾದುಕುಳಿತಿದ್ದಾರೆ. ಬಹುನಿರೀಕ್ಷೆಯ ಸಿನಿಮಾ ಪ್ರಭಾಸ್ ನಟನೆಯ 'ಕಲ್ಕಿ 2898 AD' ಬಿಡುಗಡೆ ಸಿದ್ಧವಾಗಿದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net