ಶ್ರೀಸಾಯಿಕೃಷ್ಣ ಜೆಮ್ಸ್ ಮತ್ತು ಜ್ಯೂವೆಲರಿ 30ನೇ ವಾರ್ಷಿಕೋತ್ಸವ: ಟಿ.ಎ. ಶರವಣ ಚಾಲನೆ.

sri
Published on

ಚಿತ್ರದುರ್ಗ: ಎಂ. ಶಂಕರ್ ಮೂರ್ತಿ ಅವರ ಒಡೆತನದ ಚಿತ್ರದುರ್ಗದಲ್ಲಿರವ ಶ್ರೀ ಸಾಯಿಕೃಷ್ಣ ಜೆಮ್ಸ್ ಮತ್ತು ಜ್ಯೂವೆಲರಿ ವರ್ಕ್ಸ ಸಂಸ್ಥೆಯ 30ನೇ ವಾರ್ಷಿಕೋತ್ಸವ ಸಮಾರಂಭವನ್ನು ಜುಲೈ 28ರ ಭಾನುವಾರದಂದು ಕರ್ನಾಟಕ ಜ್ಯೂವೆಲರಿ ಅಸೋಸಿಯೇಷನ್ ಅಧ್ಯಕ್ಷ ಟಿ.ಎ.ಶರವಣ ಉದ್ಘಾಟಿಸಿದರು.

ಕರ್ನಾಟಕ ರಾಜ್ಯ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಹೆಚ್.ಎಂ ರೇವಣ್ಣ, ಹು. ಧಾ ಮಹಾಪೌರ ರಾಮಪ್ಪ ಬಡಿಗೇರ್ ಶ್ರೀ ಸಾಯಿಕೃಷ್ಣ ಜೆಮ್ಸ್ ಮತ್ತು ಜ್ಯೂವೆಲರಿ ವರ್ಕ್ಸ್ 10 ಮತ್ತು 11 ನೇ ಆವಿಷ್ಕಾರದ ವಿನೂತನ ಬಂಗಾರದ ಬಳೆಗಳ ಮಾಡೆಲ್ ಬಾಕ್ಸ್ ಹಾಗೂ 5 ನೇ ಆವೃತ್ತಿಯ ಕ್ಯಾಟ್‌ಲಾಗ್ ಬಿಡುಗಡೆ ಮಾಡಿದರು.

ವಿಶ್ವಕರ್ಮ ನಾಡೋಜ ಡಾ. ಬಿ.ಎಂ ಉಮೇಶ್ ಕುಮಾರ್, ರುದ್ರಾಚಾರ್, ಚಳಕೆರೆ ಪ್ರಸನ್ನ ಕುಮಾರ್, ಸತ್ಯನಾರಾಯಣಚಾರ್, ಸುರೇಶ್ ಕುಮಾರ ಗನ್ನ, ಆರ್.ಮಧುಸೂದನ್, ಕೇಶವ್ ಮೂರ್ತಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net