ಮಲ್ಲೇಶ್ವರದಲ್ಲಿ ಶ್ರೀಸಾಯಿ ಗೋಲ್ಡ್ 7ನೇ ಮಳಿಗೆ | Srisai Gold

dk - 2025-04-09T162343.210
Published on

ಬೆಂಗಳೂರು: ಶ್ರೀಸಾಯಿ ಗೋಲ್ಡ್(Srisai Gold) ಪ್ಯಾಲೇಸ್‌ನ 7ನೇ ಮಳಿಗೆ ಮಲ್ಲೇಶ್ವರದಲ್ಲಿ ಗುರುವಾರ (ಏ.10) ಪ್ರಾರಂಭಗೊಳ್ಳಲಿದೆ. ಶ್ರೀ ವಿನಯ್ ಗುರೂಜಿ ಸಾನ್ನಿಧ್ಯ ಇರಲಿದ್ದು, ನಟ ಸುದೀಪ್ ಅವರು ಸ್ಟೋರ್ ಅನ್ನು ಉದ್ಘಾಟಿಸಲಿದ್ದಾರೆ.

ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಡೈಮಂಡ್ ವಿಭಾಗವನ್ನು ಉದ್ಘಾಟಿಸಲಿದ್ದಾರೆ. ಮಾಜಿ ಡಿಸಿಎಂ, ಶಾಸಕ ಸಿ.ಎನ್.ಅಶ್ವತ್ಥನಾರಾಯಣ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಎಡಿಜಿಪಿ ವಿರಾಜ್ ಕುಮಾ‌ರ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ನಾಳೆ ಉದ್ಘಾಟನಾ ಸಮಾರಂಭ

ವಿಶೇಷ ಆಹ್ವಾನಿತರಾಗಿ ಆರ್.ಪಿ.ರವಿಶಂಕ‌ರ್, ಸತ್ಯನಾರಾಯಣ, ನಟಿ ಪ್ರೇಮಾ, ಗಾಯಕ ಚಂದನ್ ಶೆಟ್ಟಿ, ಅನುಷಾ ರೈ, ಐಶ್ವರ್ಯಾ ಸಿಂಧೋಗಿ, ಶಿಶಿರ್ ಶಾಸ್ತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಹೊಸ ಸ್ಟೋರ್ ಉದ್ಘಾಟನೆಯ ಪ್ರಯುಕ್ತ ದುಬೈ ಬೆಲೆಯಲ್ಲಿ ಚಿನ್ನ ಸೇರಿ ಆಕರ್ಷಕ ಕೊಡುಗೆಗಳನ್ನು ನೀಡಲಾಗುತ್ತಿದೆ ಎಂದು ಶ್ರೀ ಸಾಯಿಗೋಲ್ಡ್ ಪ್ಯಾಲೇಸ್ ಎಂಡಿ ಹಾಗೂ ವಿಧಾನಪರಿಷತ್‌ ಸದಸ್ಯ ಟಿ.ಎ. ಶರವಣ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net