'ಜಗನ್ ಆಳ್ವಿಕೆಯಲ್ಲಿ ವ್ಯಾಪಾರ ಕೇಂದ್ರವಾಗಿ ತಿರುಪತಿ-ತಿರುಮಲ ಪರಿವರ್ತನೆ': ಶ್ರೀನಿವಾಸಾನಂದ ಸರಸ್ವತಿ

tirupathi
Published on

ಅಮರಾವತಿ: ಐದು ವರ್ಷಗಳ ವೈಎಸ್​ಆರ್​ ಕಾಂಗ್ರೆಸ್​ ಪಾರ್ಟಿ (ವೈಕಾಪಾ) ಆಡಳಿತದಲ್ಲಿ ಆಂಧ್ರಪ್ರದೇಶ ಪಾಳು ಬಿದ್ದಿದೆ. ಆ ಪಕ್ಷದ ಮುಖಂಡರು ದೇವಸ್ಥಾನಗಳಲ್ಲಿ ಅರ್ಚಕರ ಮೇಲೆ ಆ ಪಕ್ಷದ ಮುಖಂಡರು ಹಲ್ಲೆ ನಡೆಸಿದ್ದಾರೆ ಎಂದು ಎಪಿ ಸಾಧು ಪರಿಷತ್ ಅಧ್ಯಕ್ಷ ಶ್ರೀನಿವಾಸಾನಂದ ಸರಸ್ವತಿ ದೂರಿದರು.

ಶ್ರೀಕಾಕುಳಂನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಗನ್ ಆಳ್ವಿಕೆಯಲ್ಲಿ ವಿಶ್ವವಿಖ್ಯಾತ ಧಾರ್ಮಿಕ ಸ್ಥಳವಾದ ತಿರುಪತಿ- ತಿರುಮಲವನ್ನು ವ್ಯಾಪಾರ ಕೇಂದ್ರವಾಗಿ ಪರಿವರ್ತಿಸಲಾಗಿದೆ. ಸನಾತನ ಧರ್ಮ ವಿರೋಧಿ ಚಟುವಟಿಕೆಗಳಲ್ಲಿ ಜಗನ್​ ಸರ್ಕಾರ ತೊಡಗಿಸಿಕೊಂಡಿದೆ ಎಂದು ಹೇಳಿದರು.

ವೈಕಾಪಾ ದುಷ್ಟ ಆಡಳಿತಕ್ಕೆ ಜನರು ತಕ್ಕ ಪಾಠ ಕಲಿಸಬೇಕು. ಈ ಬಾರಿ ಜಗನ್​ ಅಧಿಕಾರದಿಂದ ದೂರವಿರುವಂತೆ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net