

ಕಡೂರು: ತಾಲೂಕಿನ ಯಳ್ಳಂಬಳಸೆ ಗ್ರಾಪಂ ಅಧ್ಯಕ್ಷರಾಗಿ ಶ್ರೀನಿವಾಸ ಸೋಮವಾರ ಅವಿರೋಧವಾಗಿ ಆಯ್ಕೆಯಾದರು.
ಹಿಂದಿನ ಅಧ್ಯಕ್ಷೆಯಾಗಿದ್ದ ಎಸ್.ಡಿ.ಪ್ರೇಮಾವತಿ ಕೇಶವಪ್ಪ ರಾಜೀನಾಮೆಯಿಂದ ಸ್ಥಾನ ತೆರವುಗೊಂಡಿತ್ತು. ಚುನಾವಣಾಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಸಿದ್ದರಾಜು ನಾಯ್ಕ ಕಾರ್ಯನಿರ್ವಹಿಸಿದರು.
ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಭೆಯಲ್ಲಿ ಅಧ್ಯಕ್ಷ ಶ್ರೀನಿವಾಸ ಮಾತನಾಡಿ, ಪಂಚಾಯಿತಿ ಸದಸ್ಯರ ಸಹಕಾರದಿಂದ ಅವಿರೋಧವಾಗಿ ಆಯ್ಕೆಯಾಗಲು ಸಾಧ್ಯವಾಯಿತು. ಗ್ರಾಮಗಳಿಗೆ ಮೂಲಸೌಲಭ್ಯ ಕಲ್ಪಿಸುವ ಜತೆಗೆ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ಗ್ರಾಪಂ ಉಪಾಧ್ಯಕ್ಷೆ ಕೆ.ಕೆ.ಪುಷ್ಪಲತಾ ಸೋಮೇಶ್, ಸದಸ್ಯರಾದ ಸೈಯಾದ್ ಸಲೀಂ, ನವೀನ್‌ಕುಮಾರ್, ಚೈತ್ರಾ ರವಿಕುಮಾರ್, ದೀಪಾ ಹನುಮಂತಪ್ಪ, ಮಂಜುಶ್ರೀ ಪ್ರವೀಣ್, ಪಿಡಿಒ ಇಸ್ಮಾಯಿಲ್ ಖಾನ್, ಮುಖಂಡರಾದ ಮುದಿಯಪ್ಪ, ತಿಮ್ಮಯ್ಯ, ಲಕ್ಕಪ್ಪ, ಎಸ್.ಕೆ.ಜಗದೀಶ್, ನಂಜುಂಡಪ್ಪ, ಆನಂದ್, ದಸ್ತಗೀರ್, ರವಿಶಂಕರ್, ಓಂಕಾರಪ್ಪ, ರಂಗಪ್ಪ, ಶರಣಬಸಪ್ಪ, ದೇವರಾಜ್, ರಮೇಶ್, ಶಾಂತಪ್ಪ, ಹರೀಶ್, ಮಂಜುನಾಥ್ ಮತ್ತಿತರರಿದ್ದರು.