ಗಣಿತ ಕ್ಷೇತ್ರಕ್ಕೆ ಶ್ರೀನಿವಾಸ ರಾಮಾನುಜನ್ ಅವರದು ಸಾಟಿಯಿಲ್ಲದ ಕೊಡಗೆ: ಐಐಎಸ್ಸಿ ಗಣಿತ ಪ್ರಾಧ್ಯಾಪಕ ಪ್ರೊ. ಆರ್. ವಿಠಲ್ ರಾವ್ ಅಭಿಪ್ರಾಯ

national
Published on

ಬೆಂಗಳೂರು: ಗಣಿತ ಕ್ಷೇತ್ರಕ್ಕೆ ಶ್ರೀನಿವಾಸ ರಾಮಾನುಜನ್ ಸಾಟಿಯಿಲ್ಲದ ಕೊಡುಗೆಗಳನ್ನು ನೀಡಿದ್ದು, ಅವರ ಸಾಧನೆ ಅನನ್ಯ ಎಂದು ಬೆಂಗಳೂರಿನ ಐಐಎಸ್ಸಿ ಗಣಿತ ವಿಭಾಗದ ಪ್ರಾಧ್ಯಾಪಕ ಪ್ರೊ. ಆರ್. ವಿಠಲ್ ರಾವ್ ತಿಳಿಸಿದ್ದಾರೆ.

ಡಾ. ಎಚ್. ಎನ್. ನ್ಯಾಷನಲ್ ಕಾಲೇಜ್ ಆ್ ಎಂಜಿನಿಯರಿಂಗ ಮತ್ತು ನ್ಯಾಷನಲ್ ಕಾಲೇಜ್ ಜಯನಗರ ಸ್ನಾತಕೋತ್ತರ ಗಣಿತ ವಿಭಾಗ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗಣಿತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

2012 ರಲ್ಲಿ ಡಾ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಪ್ರತಿವರ್ಷ ರಾಮಾನುಜನ್ ಜನ್ಮ ದಿನವನ್ನು ರಾಷ್ಟ್ರೀಯ ಗಣಿತ ದಿನವನ್ನಾಗಿ ಆಚರಿಸಬೇಕೆಂಬ ಶಿಫಾರಸ್ಸನ್ನು ಅನುಷ್ಠಾನಕ್ಕೆ ತಂದರು. ನಂತರ ಗಣಿತ ದಿನ ಆಚರಿಸುವ ಪರಂಪರೆ ಪ್ರಾರಂಭವಾಯಿತು. ತಾಂತ್ರಿಕವಾಗಿ ರಾಮಾನುಜನ್ ಅಪಾರ ಕೆಲಸ ಮಾಡಿದ್ದು, ಇದು ಶಾಶ್ವತವಾಗಿ ಉಳಿಯುತ್ತದೆ ಎಂದರು.

ಎನ್.ಇ.ಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಎಚ್. ಎನ್. ಸುಬ್ರಹ್ಮಣ್ಯ ಮಾತನಾಡಿ, ರಾಮಾನುಜನ್ ಗಣಿತ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಶಿಕ್ಷಣವನ್ನು ಉತ್ತೇಜಿಸಲು ವ್ಯಾಪಕ ಕ್ರಮಗಳನ್ನು ಕೈಗೊಂಡಿದ್ದು, ಆ ಪರಂಪರೆಯನ್ನು ನಾವು ಮುಂದುವರೆಸುತ್ತಿದ್ದೇವೆ ಎಂದರು.

ಭಾರತೀಯ ವಿದ್ಯಾ ಭವನದ ಗಾಂಧಿ ವಿಜ್ಞಾನ ಮತ್ತು ಮಾನವ ಮೌಲ್ಯಗಳ ಕೇಂದ್ರದ ನಿರ್ದೇಶಕ ಡಾ. ಎಸ್. ಬಾಲಚಂದ್ರ ರಾವ್ ,ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಬಿ. ಜೆ. ಗಿರೀಶಾ,

ಎನ್. ಇ. ಎಸ್. ನ ಕಾರ್ಯದರ್ಶಿ ಹಾಗೂ ಜಯನಗರ ನ್ಯಾಷನಲ್ ಇಂಜಿನಿಯರಿಂಗ್ ಕಾಲೇಜಿನ ಅಧ್ಯಕ್ಷ ವೆಂಕಟಾಶಿವಾ ರೆಡ್ಡಿ, ಜಯನಗರ ನ್ಯಾಷನಲ್ ಕಾಲೇಜು ಅಧ್ಯಕ್ಷ ಡಾ. ಪಿ. ಎಲ್. ವೆಂಕಟ ರಾಮ ರೆಡ್ಡಿ, ಎನ್. ಸಿ. ಜೆ. ಪ್ರಾಚಾರ್ಯ ಡಾ. ಪಿ. ಎಲ್. ರಮೇಶ ಮತ್ತು ಡಾ. ಎಚ್. ಎನ್. ನ್ಯಾಷನಲ್ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಪ್ರಾಚಾರ್ಯರಾದ ಡಾ. ಡಿ. ಜಯದೇವಪ್ಪ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net