ಶ್ರೀನಿವಾಸಪ್ರಸಾದ್ ದಲಿತರ, ಶೋಷಿತರ ಆಶಾಕಿರಣ

filter: 0; jpegRotation: 0; fileterIntensity: 0.000000; filterMask: 0;
ಎಚ್.ಡಿ.ಕೋಟೆ ಕೋಟೆ ತಾಲೂಕಿನ ಅಂಬೇಡ್ಕರ್ ಭವನದಲ್ಲಿ ಸಂಸದ ದಿ.ವಿ.ಶ್ರೀನಿವಾಸಪ್ರಸಾದ್ ನುಡಿ ನಮನ ಕಾರ್ಯಕ್ರಮಕ್ಕೆ ಶಾಸಕ ಅನಿಲ್ ಚಿಕ್ಕಮಾದು ಚಾಲನೆ ನೀಡಿದರು. ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ, ಗೌತಮಿ ಬಂತೇಜಿ. ನರಸಿಂಹಮೂರ್ತಿ, ಶಿವಣ್ಣ.ಪುರುಷೋತ್ತಮ್.ಇದ್ದರು.
Published on

ಸರಗೂರು : ರಾಜ್ಯದ ಹಿರಿಯ ರಾಜಕಾರಣಿ ವಿ.ಶ್ರೀನಿವಾಸಪ್ರಸಾದ್ ದಲಿತರಿಗೆ ಹಾಗೂ ಶೋಷಿತ ಸಮುದಾಯಗಳಿಗೆ ಆಶಾಕಿರಣವಾಗಿದ್ದರು ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.

ಪಟ್ಟಣದ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಎಚ್.ಡಿ.ಕೋಟೆ ಮತ್ತು ಸರಗೂರು ಆದಿಕರ್ನಾಟಕ ಮಹಾಸಭಾ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ವಿ.ಶ್ರೀನಿವಾಸಪ್ರಸಾದ್ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ವಾಭಿಮಾನಿ ಚಕ್ರವರ್ತಿ ಪ್ರಸಾದ್ ಅವರ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಅದರೆ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯಬಹುದು. ಬದುಕಿನ ಕೊನೆಯ ಪಯಣವೇ ಸಾವು. ಹಾಗಾಗಿ ಎಲ್ಲ ಸಮುದಾಯ ಕಾರ್ಯಕ್ರಮಗಳು ನಿಲುವು, ಬದ್ಧತೆ ಅವರನ್ನು ಉನ್ನತ ಸ್ಥಾನಕ್ಕೆ ಏರುವಂತೆ ಮಾಡಿದೆ ಎಂದು ಹೇಳಿದರು.

ಮೈಸೂರು ನಗರ ಪಾಲಿಕೆ ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಪ್ರಸಾದ್ ಅವರು, ದಲಿತರ ಮತ್ತು ಎಲ್ಲ ಸಮುದಾಯದ ಜತೆ ಕೆಲಸ ಮಾಡಿಕೊಂಡು ಬಂದರು. ರಾಜ್ಯಾದ್ಯಂತ ಶೋಷಿತ ಸಮುದಾಯವನ್ನು ಒಂದುಗೂಡಿಸುವ ಕೆಲಸ ಮಾಡಿದರು. ಕೊನೆಯ ದಿನಗಳಲ್ಲಿ ಒಪ್ಪಂದ ಸಿದ್ಧಾಂತದ ಜತೆಗೆ ರಾಜಕೀಯ ಮಾಡಬೇಕಾದ ಅನಿವಾರ್ಯತೆ ಅವರಿಗೆ ಒದಗಿ ಬಂತು.ನಾನು ಪಕ್ಷಾಂತರಿಯಾಗಿದ್ದೇನೆ, ಆದರೆ ತತ್ವಾಂತರಿಯಲ್ಲ ಎಂದಿದ್ದರು. ಅವರೊಬ್ಬ ಸಮಾಜವಾದಿ, ಸ್ವಾಭಿಮಾನಿ, ಪ್ರಜಾಪ್ರಭುತ್ವವಾದಿ ಯಾಗಿ ಬದುಕಿದವರು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಗೌತಮಿ ಬಂತೇಜಿ ಸಾನ್ನಿಧ್ಯ ವಹಿಸಿದ್ದರು. ಉರಿಲಿಂಗಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಮಾಜಿ ಸಚಿವ ಕೋಟೆ ಎಂ ಶಿವಣ್ಣ, ನಿವೃತ್ತ ಪ್ರಾಧ್ಯಾಪಕ ತಳವಾರ್‌ಮಾತನಾಡಿದರು. ಆದಿ ಕರ್ನಾಟಕ ಮಹಾಸಭಾ ಕೋಟೆ ಮತ್ತು ಸರಗೂರು ತಾಲೂಕಿನ ಅಧ್ಯಕ್ಷರು, ಪುರಸಭೆ ಸದಸ್ಯ ಎಚ್.ಸಿ.ನರಸಿಂಹಮೂರ್ತಿ, ಸರಗೂರು ಶಿವಣ್ಣ, ಪ್ರಸಾದ್ ಸಂಬಂಧಿ ಭರತ್, ಆದಿಕರ್ನಾಟಕ ಮಹಾಸಭಾ ಮಾಜಿ ಅಧ್ಯಕ್ಷ ಮುದ್ದುಮಲ್ಲಯ್ಯ, ಮಲಾರ ಪುಟ್ಟಯ್ಯ, ಸೋಗಳ್ಳಿ ಶಿವಣ್ಣ, ಜಿಪಂ ಮಾಜಿ ಸದಸ್ಯ ಪಿ.ರವಿ, ಚಿಕ್ಕವೀರನಾಯಕ, ಭಾಗ್ಯಲಕ್ಷ್ಮೀ, ವೆಂಕಟಸ್ವಾಮಿ, ಮೈಮುಲ್ ನಿರ್ದೇಶಕ ಈರೇಗೌಡ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಮಾಜಿ ಅಧ್ಯಕ್ಷ ಎಂ.ಡಿ .ಮಂಜಯ್ಯ, ನಾಯಕ ಸಮಾಜ ಅಧ್ಯಕ್ಷ ದೊಡ್ಡನಾಯಕ, ಮುಖಂಡರಾದ ಶಂಭುಲಿಂಗನಾಯಕ, ಚಾ.ನಂಜುಂಡ ಮೂರ್ತಿ, ಬಸಪ್ಪ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೆಂಡಗಣ್ಣಸ್ವಾಮಿ, ವರ್ತಕರ ಸಂಘದ ಮಂಡಳಿ ಅಧ್ಯಕ್ಷ ಶ್ರೀನಿವಾಸ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net