ಕೂಸಿನಮನೆ ಕೂಲಿಕಾರರಿಗೆ ವರದಾನ

kusina mane
ಶೃಂಗೇರಿ ತಾಲೂಕಿನ ಉಳುವೆಬೈಲು ಸರ್ಕಾರಿ ಶಾಲೆಯಲ್ಲಿ ಕೂಸಿನಮನೆಯನ್ನು ಅಡ್ಡಗದ್ದೆ ಗ್ರಾಪಂ ಅಧ್ಯಕ್ಷ ರಾಘವೇಂದ್ರ ಹಂಚಲಿ ಉದ್ಘಾಟಿಸಿದರು. ಶೈಲಜಾ, ಪ್ರಶಾಂತಿ, ಸುಕೇಶ್, ಪುಪ್ಪಲತಾ, ಅಶ್ವಿನಿ ಇದ್ದರು.
Published on

ಶೃಂಗೇರಿ: ಚಿಕ್ಕಮಕ್ಕಳ ಆರೈಕೆಗಾಗಿ ಕೂಲಿಕಾರರು ಹೆಚ್ಚು ಸಮಯ ನೀಡಲು ಸಾಧ್ಯವಿಲ್ಲ. ಬದುಕಿನ ಹೋರಾಟದಲ್ಲಿ ಕೌಟುಂಬಿಕ ನಿರ್ವಹಣೆಗಾಗಿ ಅವರು ಪ್ರತಿನಿತ್ಯ ಕೆಲಸ ಮಾಡುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಕೂಸಿನಮನೆ ಯೋಜನೆ ಅವರಿಗೆ ಸಹಕಾರಿ ಎಂದು ಅಡ್ಡಗದ್ದೆ ಗ್ರಾಪಂ ಅಧ್ಯಕ್ಷ ರಾಘವೇಂದ್ರ ಹಂಚಲಿ ತಿಳಿಸಿದರು.
ಅವರು ತಾಲೂಕಿನ ಉಳುವೆಬೈಲು ಸರ್ಕಾರಿ ಶಾಲೆಯಲ್ಲಿ ಬುಧವಾರ ಕೂಸಿನಮನೆ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ನರೇಗಾ ಯೋಜನೆ ಸಮಾಜದ ಕಟ್ಟಕಡೆಯ ಜನರಿಗೆ ಮೂಲ ಸೌಕರ್ಯ ನೀಡುವ ಜತೆಗೆ ರೈತರ ಅರ್ಥಿಕ ಅಭಿವೃದ್ಧಿಗೆ ಪೂರಕವಾಗಿದೆೆೆ. ಪ್ರಸ್ತುತ ಕೂಲಿ ಕಾರ್ಮಿಕರ ಮಕ್ಕಳಿಗಾಗಿ ಕೂಸಿನ ಮನೆ ತೆರೆಯುವ ಮೂಲಕ ಸರ್ಕಾರ ಕೂಲಿ ಕಾರ್ಮಿಕರ ಶಿಶುಗಳ ಪೋಷಣೆ ಮಾಡುವ ಗುರುತರ ಜವಾಬ್ದಾರಿ ಹೊತ್ತುಕೊಂಡಿದೆ ಎಂದರು. ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಾದ ಪುಪ್ಪಲತಾ, ನಾಗರತ್ನಾ, ಅಶ್ವಿನಿ, ಶಾಂತಾ, ಕೃಷ್ಣಮೂರ್ತಿ ಆಚಾರ್, ಪಿಡಿಒ ಪ್ರಮೋದ್, ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಸುದೀಪ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net