ನರೇಗಾದಲ್ಲಿ ಶೃಂಗೇರಿ ತಾಲೂಕು ಪ್ರಥಮ

12sri-1 narega
ಮರ್ಕಲ್ ಗ್ರಾಪಂ ಯಡದಾಳು ಗ್ರಾಮದ ಡಿ.ಆರ್.ಸದಾನಂದ ಅವರ ಜಮೀನಿನಲ್ಲಿ ನರೇಗಾ ಯೋಜನೆಯಡಿ ಅಡಕೆ ಗಿಡಗಳನ್ನು ನೆಟ್ಟಿರುವುದು.
Published on

ಶೃಂಗೇರಿ: ನರೇಗಾ ಯೋಜನೆಯಡಿ ಅತ್ಯುತ್ತಮ ಸಾಧನೆ ಮಾಡಿದ ಶೃಂಗೇರಿ ತಾಲೂಕು ಜನವರಿಯಿಂದ ಜುಲೈವರೆಗೆ ಜಿಲ್ಲೆಯಲ್ಲಿ ಮೊದಲ ಸ್ಥಾನದಲ್ಲಿದೆ.
ಗ್ರಾಮೀಣ ಜನರಿಗೆ ಯೋಜನೆಯ ಕುರಿತು ಮಾಹಿತಿ ನೀಡುತ್ತ ಅದರ ಸೌಲಭ್ಯ ತಲುಪಿಸುವಲ್ಲಿ ಯಶಸ್ಸು ಕಂಡಿದೆ. ಈ ವರ್ಷದ ಒಟ್ಟು ಗುರಿ 1,01, 083 ಮಾನವ ದಿನಗಳಲ್ಲಿ ಈಗಾಗಲೇ 55,492 ಮಾನವ ದಿನಗಳನ್ನು ವ್ಯಯಿಸಲಾಗಿದೆ. ಗ್ರಾಪಂ, ತೋಟಗಾರಿಕೆ, ಕೃಷಿ ಹಾಗೂ ಸಾಮಾಜಿಕ ಅರಣ್ಯ ಇಲಾಖೆಗಳ ಸಹಕಾರದೊಂದಿಗೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿ ನಿರ್ದಿಷ್ಟ ಗುರಿ ಸಾಧಿಸುವಲ್ಲಿ ತಾಲೂಕು, ಗ್ರಾಪಂ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾಳಜಿಯಿಂದ ಕಾರ್ಯನಿರ್ವಹಿಸಿದ್ದಾರೆ.
ಜನವರಿಯಿಂದ ಜುಲೈವರೆಗೆ ಕುತೂಗೋಡು ಗ್ರಾಪಂ ತಾಲೂಕಿಗೆ (ಪ್ರ), ಕೆರೆ (ದ್ವಿ), ಅಡ್ಡಗದ್ದೆ ಗ್ರಾಪಂ (ತೃ), ಮರ್ಕಲ್ (ಚ), ವಿದ್ಯಾರಣ್ಯಪುರ ಐದನೇ, ಮೆಣಸೆ ಆರನೇ, ನೆಮ್ಮಾರ್ ಏಳನೇ, ಧರೇಕೊಪ್ಪ ಎಂಟನೇ ಹಾಗೂ ಬೇಗಾರು ಗ್ರಾಪಂ ಕೊನೇ ಸ್ಥಾನ ಪಡೆದುಕೊಂಡಿವೆ. ತೆರಿಗೆ ಸಂಗ್ರಹ, ಸಾಮಾಜಿಕ ಪರಿಶೋಧನೆ, ವಸತಿ ಯೋಜನೆ ಹೀಗೆ 14 ಯೋಜನೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net